ಶಿವಮೊಗ್ಗ (shivamogga), ಜುಲೈ 07: ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ, ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ.
07/07/2026 ರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು 29,043 ಕ್ಯೂಸೆಕ್ ಗೆ ಏರಿಕೆಯಾಗಿದೆ.
434 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ನೀರಿನ ಮಟ್ಟ 1754.40 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1793.65 ಅಡಿ ನೀರು ಸಂಗ್ರಹವಾಗಿತ್ತು.
ಉಳಿದಂತೆ ಮಧ್ಯ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾದ ಭದ್ರಾ ಒಳಹರಿವು 8117 ಕ್ಯೂಸೆಕ್ ಗೆ ಏರಿಕೆಯಾಗಿದೆ. ಸೋಮವಾರ 4135 ಕ್ಯೂಸೆಕ್ ಒಳಹರಿವಿತ್ತು. ಉಳಿದಂತೆ ಡ್ಯಾಂ ನೀರಿನ ಮಟ್ಟ 140 ಅಡಿ 6 ಇಂದು (ಗರಿಷ್ಠ ಮಟ್ಟ : 186) ಇದೆ.
ಮಳೆ ವಿವರ : ಜುಲೈ 7 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 135 ಮಿಲಿ ಮೀಟರ್ (ಮಿ.ಮೀ.), ಯಡೂರು 157 ಮಿ.ಮೀ., ಹುಲಿಕಲ್ 148 ಮಿ.ಮೀ., ಮಾಸ್ತಿಕಟ್ಟೆ 194 ಮಿ.ಮೀ., ಸಾವೇಹಕ್ಲುವಿನಲ್ಲಿ 118 ಮಿ.ಮೀ. ಮಳೆಯಾಗಿದೆ.
Increase in inflow of Linganamakki, Bhadra reservoirs
Shivamogga, July 07: Due to heavy rains in the catchment areas, there has been an increase in the inflow of major reservoirs in the district.
As of 8 am on 07/07/2026, the inflow of Linganamakki Dam, the state’s major hydroelectric power generation center, has increased to 29,043 cusecs.
434 cusecs of water is being released. The current water level is 1754.40 feet (maximum level: 1819). Last year, on the same day, the dam had accumulated 1793.65 feet of water.
Meanwhile, the inflow of Bhadra, the main reservoir of central Karnataka, has increased to 8117 cusecs. On Monday, there was an inflow of 4135 cusecs. The dam water level is 140 feet 6 today (maximum level: 186).

