ಶಿಕಾರಿಪುರ (shikaripura), ಜುಲೈ 10: ಶಿಕಾರಿಪುರ ತಾಲೂಕಿನ ಹಲವು ವರ್ಷಗಳ ಬೇಡಿಕೆಯಾಗಿದ್ದ ಉಡುಗಣಿ, ತಾಳಗುಂದ ಹಾಗೂ ಹೊಸೂರು ಹೋಬಳಿಗಳ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸುವ ಏತ ನೀರಾವರಿ ಯೋಜನೆ ಕೊನೆಗೂ ಕಾರ್ಯಗತಗೊಂಡಿದೆ.
ಹಿರೇಕೆರೂರು ತಾಲೂಕಿನ ಚಟ್ನಹಳ್ಳಿ ಗ್ರಾಮದ ಸಮೀಪ ಹಾದು ಹೋಗಿರುವ ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲೂಕಿನ 281 ಕೆರೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಜುಲೈ 10 ರಿಂದ ವಿಧ್ಯುಕ್ತ ಚಾಲನೆ ದೊರಕಿದೆ.
ಶಿಕಾರಿಪುರ ತಾಲೂಕಿನ ಕಡೇ ನಂದಿಹಳ್ಳಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಯಲಾರಂಭಿಸಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರು ಕಡೇ ನಂದಿಹಳ್ಳಿ ಕೆರೆಗೆ ಭೇಟಿಯಿತ್ತು, ತುಂಗಭದ್ರಾ ನದಿ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪರವರ ಇಚ್ಛಶಾಕ್ತಿಯ ಫಲವಾಗಿ ಸುಮಾರು 850 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಕಾರ್ಯಗತಗೊಂಡಿದೆ. ಸದರಿ ಯೋಜನೆಯಡಿ ಶಿಕಾರಿಪುರ ತಾಲೂಕಿನ 281 ಹಾಗೂ ಹಿರೇಕೆರೂರು ತಾಲೂಕಿನ 9 ಕೆರೆಗಳು ಸೇರಿದಂತೆ ಒಟ್ಟಾರೆ 290 ಕೆರೆಗಳಿಗೆ ನೀರು ಹರಿಯಲಿದೆ.
ಪ್ರಸ್ತುತ ಮುಂಗಾರು ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರಿನ ಸಂಗ್ರಹ ಸಂಪೂರ್ಣ ಕಡಿಮೆಯಾಗಿದೆ. ಈ ವೇಳೆ ತುಂಗಭದ್ರಾ ನದಿಯಿಂದ ನೀರು ಹರಿಯುತ್ತಿರುವುದು ಶಿಕಾರಿಪುರ ತಾಲೂಕಿನ ಮೂರು ಹೋಬಳಿಗಳ ಗ್ರಾಮಸ್ಥರು, ರೈತರಲ್ಲಿ ಸಂತಸ ಉಂಟು ಮಾಡಿದೆ.
Tungabhadra river water will flow to 281 lakes in Udugani, Talagunda and Hosur hoblis of Shikaripura taluk!
Shikaripura, July 10: The long-awaited lift irrigation project to divert water from the Tungabhadra river to the lakes of Udugani, Talagunda and Hosur hoblis of Shikaripura taluk has finally been implemented.
The ambitious project to divert water from the Tungabhadra river, which passes near Chatnahalli village in Hirekerur taluk, to 281 lakes in Shikaripura taluk was formally launched on July 10.
The villagers have expressed happiness that water has started flowing from the Tungabhadra river to the last Nandihalli lake in Shikaripura taluk. Lok Sabha member BY Raghavendra visited the Kade Nandihalli lake and watched the Tungabhadra river flowing. He obtained information from the officials. He held discussions with the local villagers.
As a result of the willpower of former CM BS Yediyurappa, a lift irrigation project worth about Rs. 850 crore has been implemented. Under the said project, water will flow to a total of 290 lakes, including 281 lakes in Shikaripura taluk and 9 lakes in Hirekerur taluk.
The water storage in the lakes has completely reduced due to the current lack of monsoon rains. At this time, the water flowing from the Tungabhadra river has brought joy to the villagers and farmers of three hoblis of Shikaripura taluk.

