ಶಿವಮೊಗ್ಗ (shivamogga), ಜುಲೈ 19: ಶಿವಮೊಗ್ಗ ನಗರದ ಡಿವಿಎಸ್ ಕಾಲೇಜ್ ಎದುರು ಗಲಾಟೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು, ಮಹಿಳಾ ಸಂರಕ್ಷಣೆಗೆಂದೇ ಮೀಸಲಾಗಿರುವ ‘ಅಕ್ಕ ಪಡೆ’ ಪೊಲೀಸರು ವಶಕ್ಕೆ ಪಡೆದು ಕೇಸ್ ದಾಖಲಿಸಿದ ಘಟನೆ ನಡೆದಿದೆ.
ಆಪಾದಿತ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಉಪಟಳ ಉಂಟುಮಾಡಿ ಕಿರಿಕಿರಿ ಮಾಡುತ್ತಿರುವ ಕುರಿತಂತೆ ‘ಅಕ್ಕ ಪಡೆ’ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಪಡೆಯ ಎಎಸ್ಐ ಅಮೃತಾ ಬಾಯಿ ಹಾಗು ಕಾನ್ಸ್’ಟೇಬಲ್ ನಿರ್ಮಲಾರವರು ಆಪಾದಿತನನ್ನು ವಶಕ್ಕೆ ಪಡೆದಿದ್ದರು.
ಕೋಟೆ ಪೊಲೀಸ್ ಠಾಣೆಗೆ ಕರೆತಂದು ಲಘು ಪ್ರಕರಣ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
who was making noise in front of DVS College in Shimoga, was arrested ‘Akka Pade’! | Shimoga, July 19: An incident has taken place where the ‘Akka Pade’ police, which is dedicated to the protection of women, arrested a person who was rioting in front of DVS College in Shimoga city and registered a case.

