ಶಿವಮೊಗ್ಗ (shivamogga), ಜುಲೈ 31: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ, ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯದ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರಲಾರಂಭಿಸಿದೆ.
31/07/2026 ರ ಸಂಜೆ ಮಾಹಿತಿ ಅನುಸಾರ ತುಂಗಾ ಜಲಾಶಯದ ಒಳಹರಿವು 29,962 ಕ್ಯೂಸೆಕ್ ಇದೆ. ಈಗಾಗಲೇ ಜಲಾಶಯ ಗರಿಷ್ಠ ಮಟ್ಟ ತಲುಪಿರುವ ಕಾರಣದಿಂದ, ಒಳ ಹರಿವಿನಷ್ಟೇ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗುತ್ತಿದೆ.
ಜಲಾನಯನ ಪ್ರದೇಶವಾದ ಶೃಂಗೇರಿ ಸುತ್ತಮುತ್ತಲಿನ ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಈ ಕಾರಣದಿಂದ ಡ್ಯಾಂ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರಲಾರಂಭಿಸಿದೆ.
Shivamogga: Inflow into Tunga Reservoir Increases! | Shivamogga, July 31: Due to good rainfall in the catchment area, a steady rise in inflow has been observed at the Tunga Reservoir in Gajanur, Shivamogga taluk.

