ಶಿವಮೊಗ್ಗ (shivamogga), ಸೆಪ್ಟೆಂಬರ್ 06: ಶಿವಮೊಗ್ಗ ನಗರದ ಸೀಗೆಹಟ್ಟಿ ನಿವಾಸಿ ಕುಳ್ಳಿ ಕಿರಣ (32) ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು, ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸೆಪ್ಟೆಂಬರ್ 06 ರ ಮಧ್ಯಾಹ್ನ ನಗರದ ಹೊರವಲಯ ರಾಮಿನಕೊಪ್ಪದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಕುಳ್ಳಿ ಕಿರಣನನ್ನು ವಾಹನವೊಂದರಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಎಸ್ಪಿ ಹೇಳಿದ್ದೇನು? : ‘ಪ್ರಾಥಮಿಕ ಹಂತದ ಮಾಹಿತಿಯ ಅನುಸಾರ ಕುಳ್ಳಿ ಕಿರಣನ ಹತ್ಯೆಗೆ, ವೈಯಕ್ತಿಕ ಹಣಕಾಸು ವ್ಯವಹಾರ ಕಾರಣವಾಗಿದೆ. ಇಬ್ಬರಿಂದ ಮೂವರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ’ ಎಂದು ಎಸ್ಪಿ ನಿಖಿಲ್ ಬಿ ಅವರು ಮಾಹಿತಿ ನೀಡಿದ್ದಾರೆ.
Shivamogga: Murder case of Seegehatti rowdy-sheeter ‘Kulli’ Kiran – What did the SP say?

