ಸಾಗರ (sagara), ಅಕ್ಟೋಬರ್ 02: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನೋರ್ವ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಘಟನೆ ನಡೆದಿದೆ.
ಸಾಗರ ತಾಲೂಕಿನ ದಾಸಕೊಪ್ಪದ ನಿವಾಸಿ ತನ್ಮಯ್ (7) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 27 ರ ಸಂಜೆ ದಾಸಕೊಪ್ಪ ಗ್ರಾಮದ ಪಾಂಡುರಂಗ ದೇವಾಲಯದ ಬಳಿ ರಸ್ತೆ ಬದಿ ನಿಂತಿದ್ದ ತನ್ಮಯ್ ಗೆ, ಗೂಡ್ಸ್ ಆಟೋವೊಂದು ಡಿಕ್ಕಿ ಹೊಡೆದಿತ್ತು.
ಈ ವೇಳೆ ಬಾಲಕನ ತಲೆಗೆ ಆಟೋದ ಗ್ರೀಲ್ ಬಡಿದು ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು. ಕೂಡಲೇ ಆನಂದಪುರದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಈ ಕುರಿತಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sagara, October 2: A boy who had been admitted to a private hospital in Shivamogga after sustaining serious injuries in a road accident has passed away, as treatment proved unsuccessful. The deceased has been identified as Tanmay (7), a resident of Dasakoppa in Sagara taluk. On the evening of September 27, Tanmay was struck by a goods auto-rickshaw while standing by the roadside near the Panduranga Temple in Dasakoppa village.

