shimoga news | ಶಿವಮೊಗ್ಗ : ಮನೆಯಿಂದ ಕೆಲಸಕ್ಕೆ ತೆರಳಿದ ಮಹಿಳೆ ಕಣ್ಮರೆ!

Shivamogga: Woman goes missing after leaving for work! | Shivamogga, November 21: An incident has occurred in Shivamogga where a woman has gone missing after leaving for work.

ಶಿವಮೊಗ್ಗ (shivamogga), ನವೆಂಬರ್ 21: ಮನೆಯಿಂದ ಕೆಲಸಕ್ಕೆ ತೆರಳಿದ ಮಹಿಳೆಯೋರ್ವರು ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಹಳೇ ಮಂಡ್ಲಿ ಬಡಾವಣೆ ನಿವಾಸಿ ವಿನುತಾ (32 ವರ್ಷ) ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ ಅ.10 ರಂದು ಮನೆಯಿಂದ ಕೆಲಸಕ್ಕೆಂದು ಹೋದವರು, ಇಲ್ಲಿಯವರೆಗೂ ಮನೆಗೆ ಹಿಂದಿರುಗಿಲ್ಲ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಚಹರೆ : ಕಾಣೆಯಾದ ಮಹಿಳೆ 5 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ, ಬಿಳಿ ಜಾಕೆಟ್ ಧರಿಸಿರುತ್ತಾರೆ.

ಸದರಿ ಮಹಿಳೆಯ ಬಗ್ಗೆ ಸುಳಿವು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414, 9480803345, 8105270435 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga: Woman goes missing after leaving for work! | Shivamogga, November 21: An incident has occurred in Shivamogga where a woman has gone missing after leaving for work.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *