bhadravati news | ಭದ್ರಾವತಿ : ಪಾಳುಬಿದ್ದ ಮನೆಯಲ್ಲಿ ಭಾರೀ ಪ್ರಮಾಣದ ಪಡಿತರ ಅಕ್ಕಿ, ರಾಗಿ ಚೀಲಗಳು ಪತ್ತೆ!

Bhadravathi: Large quantity of PDS rice and ragi sacks discovered in a dilapidated house!,| Bhadravathi, November 28: An incident has come to light in Veerapura village of Bhadravathi taluk, Shivamogga district, where a large stock of rice and ragi—intended for distribution to BPL cardholders through fair price shops—was found stored in a dilapidated house, apparently for sale on the black market.

ಭದ್ರಾವತಿ (bhadravathi), ನವೆಂಬರ್ 28: ಬಿಪಿಎಲ್ ಕಾರ್ಡ್’ದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಬೇಕಾದ ಅಕ್ಕಿ ಹಾಗೂ ರಾಗಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು, ಪಾಳುಬಿದ್ದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಪ್ರಕರಣ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಆರೋಪದ ಮೇರೆಗೆ ವೀರಾಪುರ ಗ್ರಾಮದ ನಿವಾಸಿ ಹಬೀಬ್ ಎಂಬಾತನನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಒಟ್ಟಾರೆ 93 ಕ್ವಿಂಟಾಲ್ ಅಕ್ಕಿ ಚೀಲ ಹಾಗೂ 85 ಕ್ವಿಂಟಾಲ್ ರಾಗಿ ಚೀಲಗಳು ಪತ್ತೆಯಾಗಿವೆ ಎಂದು ಪೊಲೀಸ್ ಇಲಾಖೆಯು ನವೆಂಬರ್ 28 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ದಾಳಿ : ವೀರಾಪುರ ಗ್ರಾಮದ ಪಾಳುಬಿದ್ದ ಹಂಚಿನ ಮನೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಕಾರ್ಡ್’ದಾರರಿಗೆ ವಿತರಿಸಬೇಕಾದ ಅಕ್ಕಿ ಹಾಗೂ ರಾಗಿಯನ್ನು ದಾಸ್ತಾನು ಮಾಡಲಾಗಿತ್ತು.

ಈ ಕುರಿತಂತೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಅಕ್ಕಿ – ರಾಗಿ ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಶಿಲ್ಪಾ, ಉದಯ್ ಕುಮಾರ್, ಸಿಬ್ಬಂದಿಗಳಾದ ಅರುಣ್, ಸಂತೋಷ್, ರಾಮಕೃಷ್ಣ, ಹನುಮಂತ ಹಾಗೂ ಆಹಾರ ಇಲಾಖೆ ಅಧಿಕಾರಿ – ಸಿಬ್ಬಂದಿಗಳು ಉಪಸ್ಥಿತರಿದ್ದರು.

Bhadravathi: Large quantity of PDS rice and ragi sacks discovered in a dilapidated house!,| Bhadravathi, November 28: An incident has come to light in Veerapura village of Bhadravathi taluk, Shivamogga district, where a large stock of rice and ragi—intended for distribution to BPL cardholders through fair price shops—was found stored in a dilapidated house, apparently for sale on the black market.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *