ಸಹೋದರಿ, ಸಹೋದರ, ಭಾವನ ವಿರುದ್ದ ಕುಮಾರ್ ಬಂಗಾರಪ್ಪ ಟೀಕಾಪ್ರಹಾರ!

Kumar Bangarappa criticizes sister brother and actor shivarajakumar ಮಧು ಬಂಗಾರಪ್ಪ, ಗೀತಾ, ನಟ ಶಿವರಾಜಕುಮಾರ್ ವಿರುದ್ದ ಕುಮಾರ್ ಬಂಗಾರಪ್ಪ ಟೀಕಾಪ್ರಹಾರ!

ಶಿವಮೊಗ್ಗ (shivamogga), ಮೇ 1: ಶಿವಮೊಗ್ಗ ಕ್ಷೇತ್ರದ (shimoga loksabha constituency) ಕಾಂಗ್ರೆಸ್ ಅಭ್ಯರ್ಥಿಯೂ ಆದ ಸಹೋದರಿ ಗೀತಾ ಶಿವರಾಜಕುಮಾರ್, ಸಹೋದರ ಮಧು ಬಂಗಾರಪ್ಪ ಹಾಗೂ ಭಾವ, ನಟ ಶಿವರಾಜಕುಮಾರ್ ವಿರುದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ (kumar bangarappa) ಟೀಕಾಪ್ರಹಾರ ನಡೆಸಿದ್ದಾರೆ. ಆರೋಪಗಳ ಸುರಿಮಳೆಗೈದಿದ್ದಾರೆ. ( www.udayasaakshi.com )

ಶಿವಮೊಗ್ಗ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ (bjp office) ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ‘ಚುನಾವಣೆಗೆ ಬಂದಾಗ ಮಾತ್ರ ಗೀತಾ (geetha shivarajakumar) ಹಾಗೂ ಶಿವರಾಜಕುಮಾರ್ (shivarajakumar) ಬರುತ್ತಾರೆ. ಕನಿಷ್ಠ ಪಕ್ಷ ಶಿವಮೊಗ್ಗ ಜಿಲ್ಲೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳುವ ಕೆಲಸವನ್ನು ಗೀತಾ ಮಾಡಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿಯೇ (bengaluru) ಅವರು ಮತದಾನ ಮಾಡಿದ್ದಾರೆ. ಆ ಬಗ್ಗೆ ಅವರಿಗೆ ಯೋಚನೆಯೇ ಇಲ್ಲ.

ಗ್ಯಾರಂಟಿ ಏನೆಂದರೇ, ಇದೇ 7 ರ ಸಂಜೆ ಅವರು ಮನೆ ಖಾಲಿ ಮಾಡುತ್ತಾರೋ ಅಥವಾ ಜೂನ್ 4 ಕ್ಕೆ ಖಾಲಿ ಮಾಡುತ್ತಾರೋ ಗೊತ್ತಿಲ್ಲ. ಒಟ್ಟಾರೆ ಶಿವಮೊಗ್ಗದಿಂದ ಮನೆ ಖಾಲಿ ಮಾಡುತ್ತಾರೆ. ಅವರು ಹಿಂದೆ ಮಾಡಿದ್ದು ಅದೇ, ಮುಂದೆ ಮಾಡುವುದು ಇದೇಯಾಗಿದೆ ಎಂದು ವಾಗ್ದಾಳಿ ನಡೆಸಿದರು. ( www.udayasaakshi.com )

ಶಿವರಾಜಕುಮಾರ್ ಅವರು ಕ್ಷೇತ್ರದ ಎಲ್ಲೆಡೆ ಹೋಗುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಚುನಾವಣೆಯಲ್ಲಿ ಗೆದ್ದ ನಂತರ ದಿನದ 24 ಗಂಟೆಗಳ ಕಾಲವೂ ಹಾಡು, ಡ್ಯಾನ್ಸ್ ಮಾಡುವುದಾಗಿ ಹೇಳಿಕೊಂಡು ಹೋಗುತ್ತಿದ್ಧಾರೆ. ಇದು ರಾಜಕಾರಣದಲ್ಲಿ ಮಾಡುವಂತದ್ದಲ್ಲ. ಡಾ.ರಾಜಕುಮಾರ್ (dr.rajakumar) ಅವರು ಎಲ್ಲಿ ಹೇಳಿದ್ದಾರೋ ಆ ಸ್ಥಳದಲ್ಲಿ ಮಾತ್ರ ಇವೆಲ್ಲ  ಮಾಡಬೇಕು ಎಂದು ತಿಳಿಸಿದ್ದಾರೆ.

ಡಾ.ರಾಜಕುಮಾರ್ ಅವರಿಗೆ ರಾಜಕಾರಣದಲ್ಲಿ ಸಾಕಷ್ಟು ಆಸಕ್ತಿಯಿತ್ತು. ಈ ಕಾರಣದಿಂದಲೇ ರಾಜಕಾರಣದಲ್ಲಿದ್ದ ಬಂಗಾರಪ್ಪ ಪುತ್ರಿಯೊಂದಿಗೆ ಮದುವೆ ಮಾಡಿಸಿಕೊಟ್ಟರು ಎಂದು ಶಿವರಾಜಕುಮಾರ್ ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳಿನ ಕಂತೆಯಾಗಿದೆ. ರಾಜಕುಮಾರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿಯಿದ್ದರೆ ಯಾವಾಗಲೋ ಮುಖ್ಯಮಂತ್ರಿಯಾಗುವ ಅವಕಾಶವನ್ನು ಜನರು ಕಲ್ಪಿಸಿದ್ದರು. ಆದರೆ ಅವರ ಕಡೆಯ ಉಸಿರಿನವರೆಗೂ ಕಲಾ ಸೇವೆ ಮಾಡಿಕೊಂಡಿದ್ದರು. ಆದರೆ ಇವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ( www.udayasaakshi.com )

ಇಡೀ ಚಿತ್ರರಂಗ ತಮಗೆ ಬೆಂಬಲವಾಗಿದೆ ಎಂದು ಶಿವರಾಜಕುಮಾರ್ ಹೇಳುತ್ತಿದ್ದಾರೆ. ಯಾರೋ ಅವರ ಪರ ಮೂರ್ನಾಲ್ಕು ಜನ ಬಂದು ಹೋಗಿದ್ದಾರೆ. ಆದರೆ ಇಡೀ ಚಿತ್ರರಂಗ ಬೆಂಬಲಿಸಲಿದೆ ಎಂಬುವುದು ಸರಿಯಲ್ಲ ಎಂದು ಹೇಳಿದರು.

ಚುನಾವಣೆ ಎಂಬುವುದು ಹಬ್ಬವಾಗಿದೆ. ಮಧು ಬಂಗಾರಪ್ಪ (madhu bangarappa) ದುರಂಹಕಾರ, ದ್ವೇಷವನ್ನೇ ಆಸ್ತಿ ಮಾಡಿಕೊಂಡಿದ್ದಾರೆ. ಜಾತಿಯಾಧಾರಿತ ರಾಜಕಾರಣ ಮಾಡುತ್ತಿದ್ದಾರೆ. ಅಭಿವೃದ್ದಿ ಏನೆಂಬುವುದೇ ಇವರಿಗೆ ಗೊತ್ತಿಲ್ಲ. ಶಿವಮೊಗ್ಗ ಜಿಲ್ಲೆಯ ಪರಿಕಲ್ಪನೆಯೇ ಗೊತ್ತಿಲ್ಲ ಎಂದು ಟೀಕಿಸಿದರು. ( www.udayasaakshi.com )

ಕಾಲೇಜ್ ಗೆ ಸರಿಯಾಗಿ ಹೋಗಲಿಲ್ಲ. ಹೇಗೆ ಪದವಿ ಪ್ರಮಾಣಪತ್ರ ಪಡೆದುಕೊಂಡರೋ ಗೊತ್ತಿಲ್ಲ. ಇವರಿಗೆ ಶಿಕ್ಷಣ ಸಚಿವ ಸ್ಥಾನ ನೀಡಿದಾಗ, ಕರ್ನಾಟಕ ಯಾವ ಸ್ಥಿತಿಗೆ ಬಂತಪ್ಪ ಎಂದು ಅಂದುಕೊಂಡಿದ್ದೆ. ಅವರಿಗೆ ಸೂಕ್ತ ಶಿಕ್ಷಣದ ಅವಶ್ಯಕತೆಯಿದೆ. ಸೌಜನ್ಯದಿಂದ ಮಾಧ್ಯಮದವರು ಹಾಗೂ ಜನರೊಂದಿಗೆ ಮಾತನಾಡುವುದನ್ನು ಕಲಿತುಕೊಳ್ಳಬೇಕಾಗಿದೆ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *