ಮಲೆನಾಡಿನಲ್ಲಿ ಕಡಿಮೆಯಾದ ಮುಂಗಾರು ಮಳೆಯ ಆರ್ಭಟ : ಇಂದಿನಿಂದ ಶಾಲಾ – ಕಾಲೇಜ್ ಗಳು ಪುನಾರಾರಂಭ!

Reduced monsoon rains in Shimoga district: Schools and colleges will resume from today! ಶಿವಮೊಗ್ಗ ಜಿಲ್ಲೆಯಲ್ಲಿ ಕಡಿಮೆಯಾದ ಮುಂಗಾರು ಮಳೆಯ ಆರ್ಭಟ : ಇಂದಿನಿಂದ ಶಾಲಾ – ಕಾಲೇಜ್ ಗಳು ಪುನಾರಾರಂಭ!

ಶಿವಮೊಗ್ಗ (shivamogga), ಜು. 22: ಮಲೆನಾಡು (malnad) ಭಾಗದಲ್ಲಿ ಕಳೆದೆರೆಡು ವಾರಗಳಿಂದ ಆರ್ಭಟಿಸುತ್ತಿದ್ದ ಮುಂಗಾರು ಮಳೆಯ (monsoon rain) ತೀವ್ರತೆ ಕಡಿಮೆಯಾಗಿದೆ. ಇದರಿಂದ ಉಕ್ಕಿ ಹರಿಯುತ್ತಿದ್ದ (flood) ಹಳ್ಳಕೊಳ್ಳ, ಕೆರೆಕಟ್ಟೆ, ನದಿಗಳು ಕ್ರಮೇಣ ಸಹಜ ಸ್ಥಿತಿಗೆ ಮರಳಲಾರಂಭಿಸಿವೆ.

ಭಾರೀ ಮಳೆಯಿಂದ (heavy rainfall) ಕೆರೆಕಟ್ಟೆ, ಜಲಾಶಯಗಳ ನೀರಿನ ಸಂಗ್ರಹದಲ್ಲಿ (dams water level) ಗಣನೀಯ ಏರಿಕೆ ಕಂಡುಬಂದಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ (linganamakki dam) ಹಾಗೂ ಭದ್ರಾ ಡ್ಯಾಂಗಳು (bhadra dam) ಹೊರತುಪಡಿಸಿ, ಉಳಿದೆಲ್ಲ ಡ್ಯಾಂಗಳ ನೀರಿನ ಮಟ್ಟ ಗರಿಷ್ಠ ಮಟ್ಟ ತಲುಪಿವೆ (maximum water). ನೀರು ಹೊರ ಬಿಡಲಾಗುತ್ತಿದೆ (out flow).

ಸೊರಬ (sorab) ಹಾಗೂ ಸಾಗರ (sagar) ತಾಲೂಕಿನಲ್ಲಿ ವರದಾ ನದಿ (varda river) ಸೃಷ್ಟಿಸಿದ್ದ ಪ್ರವಾಹದಿಂದ (flood) ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿತ್ತು. ಹಲವೆಡೆ ರಸ್ತೆ, ಸೇತುವೆಗಳ ಮೇಲೆ ನೀರು ಹರಿಯುತ್ತಿತ್ತು. ಮಳೆ ಕಡಿಮೆಯಾಗಿರುವುದರಿಂದ ಕ್ರಮೇಣ ನದಿ ನೀರಿನ ಹರಿವಿನಲ್ಲಿ ಇಳಿಕೆಯಾಗಿದ್ದು, ಪ್ರವಾಹ ಸ್ಥಿತಿ ತಗ್ಗಲಾರಂಭಿಸಿದೆ.

ತುಂಗಾ ಜಲಾಶಯದಿಂದ (tunga dam) 70 ಸಾವಿರಕ್ಕೂ ಅಧಿಕ ಪ್ರಮಾಣದ ನೀರು ಹೊರ ಬಿಡುತ್ತಿದ್ದ ಕಾರಣದಿಂದ, ಶಿವಮೊಗ್ಗ ನಗರದ (shimoga city) ಮೂಲಕ ಹಾದು ಹೋಗಿರುವ ತುಂಗಾ ನದಿಯು (tunga river) ಅಪಾಯದ ಮಟ್ಟದಲ್ಲಿ (danger level) ಹರಿಯುತ್ತಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ನಗರದ ಕೋರ್ಪಳಯ್ಯನ ಛತ್ರದ ಬಳಿ ಅಪಾಯದ ಮಟ್ಟ ಸೂಚಿಸುವ ಮಂಟಪ ನದಿ ನೀರಿನಲ್ಲಿ ಮುಳುಗಡೆಯಾಗಿತ್ತು.

ಇದೀಗ ತುಂಗಾ ಡ್ಯಾಂನಿಂದ ಬಿಡುಗಡೆ ಮಾಡುತ್ತಿರುವ (out flow) ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ತುಂಗಾ ನದಿ  ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಮುಳುಗಿದ್ದ ಮಂಟಪ ಗೋಚರವಾಗುತ್ತಿದೆ.

ಪುನಾರಾರಂಭ : ಭಾರೀ ಮಳೆ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಜು. 16 ರಿಂದ ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಿಕೊಂಡು ಬರಲಾಗಿತ್ತು. ಇದೀಗ ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ, ಸೋಮವಾರದಿಂದ (july 22) ಶಾಲಾ – ಕಾಲೇಜ್ ಗಳು (school – college) ಎಂದಿನಂತೆ ಪುನಾರಾರಂಭಗೊಂಡಿವೆ.  

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →