Government school wall collapsed due to heavy rain: A big tragedy missed! ಭಾರೀ ಮಳೆಗೆ ಕುಸಿದ ಸರ್ಕಾರಿ ಶಾಲೆ ಗೋಡೆ : ತಪ್ಪಿದ ಭಾರೀ ದೊಡ್ಡ ದುರಂತ!

ಭಾರೀ ಮಳೆಗೆ ಕುಸಿದ ಸರ್ಕಾರಿ ಶಾಲೆ ಗೋಡೆ : ತಪ್ಪಿದ ಭಾರೀ ದೊಡ್ಡ ದುರಂತ!

ಆನವಟ್ಟಿ (anavatti), ಜು. 23: ಸೊರಬ (sorab) ತಾಲೂಕಿನಲ್ಲಿ ಮಳೆಯ (rain) ಅಬ್ಬರ ಮುಂದುವರೆದಿದೆ. ಈ ನಡುವೆ ಮಂಗಳವಾರ ಆನವಟ್ಟಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ (govt high school) ಗೋಡೆ ಕುಸಿದು ಬಿದ್ದ ಆತಂಕಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ, ಕೊಠಡಿಯಲ್ಲಿ ಯಾವುದೇ ವಿದ್ಯಾರ್ಥಿಗಳು (students) ಇರಲಿ್ಲ್ಲ ಎಂದು ತಿಳಿದುಬಂದಿದೆ.

ಸದರಿ ಸರ್ಕಾರಿ ಶಾಲೆಯಲ್ಲಿ 104 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮಧ್ಯಾಹ್ನ ತರಗತಿ ಮುಗಿಸಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಗೋಡೆ ಕುಸಿದ (wall collapsed) ಕೊಠಡಿಯಲ್ಲಿ 31 ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ನೀಡಿದ ವಿಶ್ರಾಂತಿ ಸಮಯದಲ್ಲಿ ಕೊಠಡಿ ಗೋಡೆ ಕುಸಿದಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನಾಹುತವಾಗಿಲ್ಲ. ಆದರೆ, ಮೇಜು, ಆಸನಗಳು ಮತ್ತು ವಿದ್ಯಾರ್ಥಿಗಳ ಪಠ್ಯ ಪರಿಕರಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಶಾಲೆಯು ಶಿಥಿಲಾವ್ಯಸ್ಥೆಯಲ್ಲಿದ್ದು, ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ದೂರುತ್ತಾರೆ. ತರಗತಿ ನಡೆಯುವ ವೇಳೆ ಗೋಡೆ ಕುಸಿದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ಸ್ಥಳಕ್ಕೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Bus-car collision: Shimoga Christian guru died on the spot! ಬಸ್ – ಕಾರು ಡಿಕ್ಕಿ : ಶಿವಮೊಗ್ಗ ಕ್ರೈಸ್ತ ಧರ್ಮ ಗುರುಗಳು ಸ್ಥಳದಲ್ಲಿಯೇ ಸಾವು! Previous post ಬಸ್ – ಕಾರು ಡಿಕ್ಕಿ : ಶಿವಮೊಗ್ಗ ಕ್ರೈಸ್ತ ಧರ್ಮ ಗುರುಗಳು ಸ್ಥಳದಲ್ಲಿಯೇ ಸಾವು!
Theft in the factory: Shimoga - Bhadravati four accused arrested! ಕಾರ್ಖಾನೆಯಲ್ಲಿ ಕಳವು : ಶಿವಮೊಗ್ಗ – ಭದ್ರಾವತಿಯ ನಾಲ್ವರು ಆರೋಪಿಗಳು ಅರೆಸ್ಟ್! Next post ಕಾರ್ಖಾನೆಯಲ್ಲಿ ಕಳವು : ಶಿವಮೊಗ್ಗ – ಭದ್ರಾವತಿಯ ನಾಲ್ವರು ಆರೋಪಿಗಳು ಅರೆಸ್ಟ್!