ಕಾರ್ಖಾನೆಯಲ್ಲಿ ಕಳವು : ಶಿವಮೊಗ್ಗ – ಭದ್ರಾವತಿಯ ನಾಲ್ವರು ಆರೋಪಿಗಳು ಅರೆಸ್ಟ್!

Theft in the factory: Shimoga - Bhadravati four accused arrested! ಕಾರ್ಖಾನೆಯಲ್ಲಿ ಕಳವು : ಶಿವಮೊಗ್ಗ – ಭದ್ರಾವತಿಯ ನಾಲ್ವರು ಆರೋಪಿಗಳು ಅರೆಸ್ಟ್!

ಭದ್ರಾವತಿ (bhadravati), ಜು. 24: ನಗರದ ಹೊರವಲಯ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ (machenahalli industrial area) ಕಾರ್ಖಾನೆಯೊಂದರಲ್ಲಿ (factory) ಕಳವು ಮಾಡಿದ್ದ ಆರೋಪದ ಮೇರೆಗೆ, ನಾಲ್ವರು ಆರೋಪಿಗಳನ್ನು ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು (bhadravati new town police station) ಬಂಧಿಸಿದ ಘಟನೆ ನಡೆದಿದೆ.

ಭದ್ರಾವತಿ ತಾಲೂಕು ಜೇಡಿಕಟ್ಟೆ ಹೊಸೂರು ನಿವಾಸಿ ಗಂಗಾಧರ್ (28), ದೊಣಬಘಟ್ಟ ನಿವಾಸಿ ಮುಷ್ತಾಕ್ತಿಂ ಅಲಿಯಾಸ್ ಮುಸ್ತು (22), ಶಿವಮೊಗ್ಗ (shivamogga) ಟ್ಯಾಂಕ್ ಮೊಹಲ್ಲಾ ನಿವಾಸಿ ಮೊಹಮ್ಮದ್ ಇಮ್ರಾನ್ ಖಾನ್ (35) ಹಾಗೂ ನಂಜಪ್ಪ ಲೇಔಟ್ ನ ಮದಾರಿಪಾಳ್ಯ ರಸ್ತೆ ನಿವಾಸಿ ಮೊಹಮ್ಮದ್ ಹಫೀಜುಲ್ಲಾ (33) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

30-6-2024 ರಂದು ರಾತ್ರಿ ಮಾಚೇನಹಳ್ಳಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ರಾಜೇಶ್ವರಿ ಸಿ.ಎನ್.ಸಿ ಮಿಷನಿಂಗ್ ಟೆಕ್ನಾಲಜಿ ಫ್ಯಾಕ್ಟರಿಯಲ್ಲಿ (factory) ಕಳವು ನಡೆದಿತ್ತು. ಏರ್ ವೆಂಟಿಲೇಟರ್ ಮೂಲಕ ಒಳ ಪ್ರವೇಶಿಸಿದ್ದ ಆರೋಪಿಗಳು, ಸ್ಟೀಲ್ ಕ್ಯಾಸ್ಟಿಂಗ್ ಗಳನ್ನು (steel casting) ಕಳವು ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ (new town police station) ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳಿಂದ ಅಂದಾಜು 1.40 ಲಕ್ಷ ರೂ. ಮೌಲ್ಯದ 1 ಟನ್ ತೂಕದ 40 ಸ್ಟೀಲ್ ಕ್ಯಾಸ್ಟಿಂಗ್ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭದ್ರಾವತಿ ಡಿವೈಎಸ್ಪಿ (dysp) ನಾಗರಾಜ್ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ (inspector) ಶ್ರೀಶೈಲ್ ಕುಮಾರ್ ನೇತೃತ್ವದ ಸಬ್ ಇನ್ಸ್’ಪೆಕ್ಟರ್ (sub inspector) ರಮೇಶ್, ಎಎಸ್ಐ ಮಂಜಪ್ಪ, ಸಿಬ್ಬಂದಿಗಳಾದ ನವೀನ್, ರಾಘವೇಂದ್ರ, ಪ್ರಸನ್ನ ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →