
ಮೂರು ಜನರ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ
ಆನಂದಪುರ (anandapura), ಜು. 26: ಹೊಳೆ ನೀರಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಳ್ಳಲು ಮುಂದಾಗಿದ್ದ, ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ (police personnel), ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಸಾಗರ ಪೇಟೆ ಪೊಲೀಸ್ ಠಾಣೆ (sagar town station) ಹೆಡ್ ಕಾನ್ಸ್’ಟೇಬಲ್ ಶಿವರುದ್ರಯ್ಯ ಎ ಆರ್ ಹಾಗೂ ಡಿಎಆರ್ (dar) ಎಪಿಸಿ ಶಿವಾನಂದ್ ಸನ್ಮಾನಕ್ಕೊಳಗಾದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ (anandapura police station) ನಡೆದ ಸರಳ ಕಾರ್ಯಕ್ರಮದಲ್ಲಿ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ (sp g k mithun kumar) ಅವರು ಸದರಿ ಸಿಬ್ಬಂದಿಗಳಿಗೆ ಶಾಲು ಹೊದಿಸಿ, ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಗರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ (dysp) ಗೋಪಾಲಕೃಷ್ಣ ಟಿ ನಾಯಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಸಕಾಲಿಕ ಕ್ರಮ : ತುರ್ತ ಸಹಾಯವಾಣಿ ವಾಹನ 112-ERSS ನಲ್ಲಿ ಶಿವರುದ್ರಯ್ಯ ಎ ಆರ್, ಮತ್ತು ವಾಹನ ಚಾಲಕ ಶಿವಾನಂದ್ ಅವರು 22-07-2024 ರಂದು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಅಂದು ಮಧ್ಯಾಹ್ನ ಸಾಗರ (sagar) ತಾಲೂಕಿನ ಕುಗ್ವೆ ಗ್ರಾಮದ ಹೊಳೆ ನೀರಿಗೆ ಬಿದ್ದು ಮಹಿಳೆಯೋರ್ವರು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿರುವ ಮಾಹಿತಿ ಲಭಿಸಿತ್ತು.
ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಈ ಇಬ್ಬರು ಸಿಬ್ಬಂದಿಗಳು, ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದರು. ಸಿಬ್ಬಂದಿಗಳ ಈ ಸಕಾಲಿಕ ಕ್ರಮವು ಸಾರ್ವಜನಿಕ ವಲಯದ ಮೆಚ್ಚುಗೆಗೆ ಪಾತ್ರವಾಗಿತ್ತು.