thirthahalli | College student suspected of jumping into Tunga river : Search by fire brigade ತೀರ್ಥಹಳ್ಳಿ ತುಂಗಾ ನದಿಗೆ ಕಾಲೇಜು ವಿದ್ಯಾರ್ಥಿ ಹಾರಿದ ಶಂಕೆ : ಅಗ್ನಿಶಾಮಕ ದಳದಿಂದ ಶೋಧ

thirthahalli | ತುಂಗಾ ನದಿಗೆ ಕಾಲೇಜು ವಿದ್ಯಾರ್ಥಿ ಹಾರಿದ ಶಂಕೆ : ಅಗ್ನಿಶಾಮಕ ದಳದಿಂದ ಶೋಧ

ತೀರ್ಥಹಳ್ಳಿ (thirthahalli), ಆ. 31: ಕಾಲೇಜ್ ವಿದ್ಯಾರ್ಥಿಯೋರ್ವ (college student) ತುಂಗಾ ನದಿಗೆ ಹಾರಿರುವ ಅನುಮಾನದ ಹಿನ್ನೆಲೆಯಲ್ಲಿ, ಆ. 31 ರ ಶನಿವಾರ ಬೆಳಿಗ್ಗೆಯಿಂದ ಅಗ್ನಿಶಾಮಕ ದಳ ತಂಡವು ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ತೀರ್ಥಹಳ್ಳಿ ಸಮೀಪದ ಇಂದಾವರದ ಗ್ರಾಮದ ನಿವಾಸಿ ಜಯದೀಪ್ (24) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಅಂತಿಮ ಪದವಿ ವಿದ್ಯಾರ್ಥಿಯಾಗಿದ್ದಾನೆ. ಸೇತುವೆ ಬಳಿಯ ಮಾಧವ ಕಲ್ಯಾಣ ಮಂಟಪ ಸಮೀಪದ ತುಂಗಾ ನದಿ (tunga river) ಯಲ್ಲಿ ಯುವಕನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ಅಗ್ನಿಶಾಮಕ ದಳ (fire brigade) ದ ಅಧಿಕಾರಿ ನಾಗರಾಜ್ ಹಾಗೂ ಸಿಬ್ಬಂದಿಗಳಾದ ಶಾಕಿಬ್, ಆದರ್ಶ, ಶಿವು, ಶರತ್ ಅವರು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಯುವಕನು ತನ್ನ ಮೊಬೈಲ್ ಫೋನ್ ವ್ಯಾಟ್ಸಾಪ್ ಸ್ಟೇಟಸ್ (whatsup status) ನಲ್ಲಿ ಸಾವಿನ ಸಂದೇಶ ಹಾಕಿದ್ದಾನೆ. ಹಾಗೆಯೇ ಆತ ಬಳಸುತ್ತಿದ್ದ ಬೈಕ್ (bike) ನದಿ ಸಮೀಪ ಪತ್ತೆಯಾಗಿದೆ.

ಈ ಕಾರಣದಿಂದ ನದಿ (river) ಗೆ ಹಾರಿರುವ ಅನುಮಾನದ ಮೇರೆಗೆ ತುಂಗಾ ನದಿ (tunga river) ಯಲ್ಲಿ ಶೋಧ ಕಾರ್ಯ (search operation) ನಡೆಸಲಾಗುತ್ತಿದೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

shimoga | A leopard attacked a cow tied in a barn! ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ! Previous post shimoga | ಶಿವಮೊಗ್ಗ – ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ!
anywhere registration of property system from Sep 2 ಸೆ. 2 ರಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ : ಏನೀದು ಹೊಸ ವ್ಯವಸ್ಥೆ? Next post shimoga | ಸೆ. 2 ರಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ : ಏನೀದು ಹೊಸ ವ್ಯವಸ್ಥೆ?