thirthahalli | Theerthahalli : Police saved the life of a person who was drowning in lake water! ತೀರ್ಥಹಳ್ಳಿ : ಕೆರೆ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಜೀವ ರಕ್ಷಿಸಿದ ಪೊಲೀಸರು

thirthahalli | ತೀರ್ಥಹಳ್ಳಿ : ಕೆರೆ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಜೀವ ರಕ್ಷಿಸಿದ ಪೊಲೀಸರು!

ತೀರ್ಥಹಳ್ಳಿ (thirthahalli), ಸೆ. 18: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕೆರೆಗೆ ಧುಮುಕಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯೋರ್ವರನ್ನು, ಸಿನಿಮೀಯ ಶೈಲಿಯಲ್ಲಿ ಪೊಲೀಸರಿಬ್ಬರು ರಕ್ಷಿಸಿ ಜೀವ ಉಳಿಸಿದ ಘಟನೆ, ತೀರ್ಥಹಳ್ಳಿ ತಾಲೂಕಿನ ಯಡೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾಳೂರು ಪೊಲೀಸ್ ಠಾಣೆ (malur police station) ಹೆಡ್ ಕಾನ್ಸ್’ಟೇಬಲ್ ರಾಮಪ್ಪ ಹಾಗೂ ಡಿಎಆರ್ ವಾಹನ ಚಾಲಕರಾದ ಎ.ಹೆಚ್.ಸಿ. ಲೋಕೇಶ್ ಅವರೇ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಸಿಬ್ಬಂದಿಗಳೆಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ : 17-09-2024  ರಂದು ರಾತ್ರಿ, ವ್ಯಕ್ತಿಯೊಬ್ಬರು ತೀರ್ಥಹಳ್ಳಿಯ ಯಡೇಹಳ್ಳಿ ಕೆರೆ (yadehalli lake) ಯಲ್ಲಿ ಮುಳುಗಿ ಆತ್ಮಹತ್ಯೆಗೆ (suicide attempt) ಪ್ರಯತ್ನಿಸುತ್ತಿದ್ದಾರೆಂದು 112-ERSS ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದರು.

ಈ ಮಾಹಿತಿ ಆಧಾರದ ಮೇಲೆ ಮಾಳೂರು ಠಾಣೆ ವ್ಯಾಪ್ತಿಯ 112 – ERSS ವಾಹನದಲ್ಲಿ ಕರ್ತವ್ಯದಲ್ಲಿದ್ದ ರಾಮಪ್ಪ ಹಾಗೂ ಚಾಲಕ ಲೋಕೇಶ್ ಅವರು ತ್ವರಿತಗತಿಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಕೆರೆ ಸಮೀಪದ ಅಂಗನವಾಡಿ ಕಟ್ಟಡದ ಬಳಿ ಕಾರೊಂದು ನಿಂತಿರುವುದನ್ನು ಗಮನಿಸಿದ್ದಾರೆ. ಕೆರೆಯ ಬಳಿ ಶೋಧಿಸಿದಾಗ, ಕೆರೆ ನೀರಿನಲ್ಲಿ ವ್ಯಕ್ತಿಯೋರ್ವರು ಮುಳುಗುತ್ತಿರುವುದು (drowning) ಕಂಡುಬಂದಿದೆ. ನೀರಿಗೆ ಧುಮುಕಿ ಅವರನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ.

ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ವ್ಯಕ್ತಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ (thirthahalli govt hospital) ಗೆ ದಾಖಲಿಸಿದ್ದಾರೆ ಎಂದು ಸೆ. 18 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಭಿನಂದನೆ : ಸದರಿ ಪೊಲೀಸ್ ಸಿಬ್ಬಂದಿಗಳ ಸಕಾಲಿಕ ಕಾರ್ಯನಿರ್ವಹಣೆಯನ್ನು ಜಿಲ್ಲಾ ರಕ್ಷಣಾಧಿಕಾರಿ (shimoga sp) ಜಿ.ಕೆ.ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ

Shimoga : Gram panchayat secretary caught with bribe money! ಶಿವಮೊಗ್ಗ : ಲಂಚದ ಹಣದ ಸಮೇತ ಸಿಕ್ಕಿಬಿದ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ! Previous post shimoga | lokayukta | ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕರ ಕುಂದು ಕೊರತೆ ಸಭೆ
cm siddaramaiah | Action against police for not controlling drug trade: CM Khadak warns ಮಾದಕ ವಸ್ತುಗಳ ದಂಧೆ ನಿಯಂತ್ರಿಸದ ಪೊಲೀಸರ ವಿರುದ್ದ ಕ್ರಮ : ಸಿಎಂ ಖಡಕ್ ಎಚ್ಚರಿಕೆ Next post cm siddaramaiah | ಮಾದಕ ವಸ್ತುಗಳ ದಂಧೆ ನಿಯಂತ್ರಿಸದ ಪೊಲೀಸರ ವಿರುದ್ದ ಕ್ರಮ : ಸಿಎಂ ಖಡಕ್ ಎಚ್ಚರಿಕೆ