Monsoon rains are back in full swing in the hills! ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕು!

shimog rain | ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ!

ಶಿವಮೊಗ್ಗ (shivamogga), ಅ. 1: ಮುಂಗಾರು ಮಳೆ ಅವಧಿ ಪೂರ್ಣಗೊಂಡಿದೆ. ವರ್ಷಧಾರೆಯ ಅಬ್ಬರ ಕೂಡ ಕಡಿಮೆಯಾಗಿದೆ. ಈ ನಡುವೆ ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ, ಚದುರಿದಂತೆ ಮಳೆಯಾಗುತ್ತಿದೆ. ಅ. 1 ರ ಮಂಗಳವಾರ ಸಂಜೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ವರ್ಷಧಾರೆಯಾಯಿತು.

ಮಂಗಳವಾರ ಹಗಲು ಬಿಸಿಲಿನ ಬೇಗೆ ಹೆಚ್ಚಿತ್ತು. ಬೇಸಿಗೆಯ ಬಿಸಿಲಿನ ಅನುಭವ ಉಂಟು ಮಾಡಿತ್ತು. ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಭರ್ಜರಿ ಮಳೆಯಾಯಿತು (rain). ಇದು ನಾಗರೀಕರಲ್ಲಿ ನೆಮ್ಮದಿಯ ಭಾವ ಮೂಡುವಂತೆ ಮಾಡಿತು.

ಮುಂದಿನ ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಗುರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಮುಂಗಾರು ಅಂತ್ಯ : ಕಳೆದ ವರ್ಷ ಕೈಕೊಟ್ಟಿದ್ದು ಮುಂಗಾರು ಮಳೆ, ಪ್ರಸ್ತುತ ವರ್ಷ ಉತ್ತಮವಾಗಿ ಬಿದ್ದಿತ್ತು. ಜಿಲ್ಲೆಯ ಬಹುತೇಕ ಜಲಾಶಯ, ಕೆರೆಕಟ್ಟೆಗಳು ಭರ್ತಿಯಾಗಿವೆ. ಉಳಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿತ್ತು.

ಈ ನಡುವೆ ಸೆಪ್ಟೆಂಬರ್ 30 ಕ್ಕೆ ಮುಂಗಾರು ಮಳೆ (monsoon rain) ಅಂತ್ಯಗೊಂಡಿದೆ. ಅಕ್ಟೋಬರ್ 1 ರಿಂದ ಹಿಂಗಾರು ಮಳೆ ಆರಂಭವಾಗಿದೆ.

shimoga : Monsoon season is over. Meanwhile, it has been raining in various parts of the district for the past few days. On Tuesday evening, many parts of the district, including Shimoga city, saw good rain.

Cleanliness program in district court premises of Shimoga city on Tuesday ಶಿವಮೊಗ್ಗ : ನ್ಯಾಯಾಲಯ ಆವರಣ ಸ್ವಚ್ಛಗೊಳಿಸಿದ ನ್ಯಾಯಾಧೀಶರುಗಳು Previous post shimoga | ಶಿವಮೊಗ್ಗ : ನ್ಯಾಯಾಲಯ ಆವರಣ ಸ್ವಚ್ಛಗೊಳಿಸಿದ ನ್ಯಾಯಾಧೀಶರು
bengaluru | Gandhi's Sarvodaya - Ambedkar's Antyodaya Government Mission : CM Siddaramaiah ಗಾಂಧಿಯವರ ಸರ್ವೋದಯ ಅಂಬೇಡ್ಕರ್ ರವರ ಅಂತ್ಯೋದಯ ನೀತಿಗಳೆ ಸರ್ಕಾರದ ಧ್ಯೇಯ : ಸಿಎಂ ಸಿದ್ದರಾಮಯ್ಯ Next post bengaluru | ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ರವರ ಅಂತ್ಯೋದಯ ಸರ್ಕಾರದ ಧ್ಯೇಯ : ಸಿಎಂ ಸಿದ್ದರಾಮಯ್ಯ