shimog rain | ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ!

Monsoon rains are back in full swing in the hills! ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕು!

ಶಿವಮೊಗ್ಗ (shivamogga), ಅ. 1: ಮುಂಗಾರು ಮಳೆ ಅವಧಿ ಪೂರ್ಣಗೊಂಡಿದೆ. ವರ್ಷಧಾರೆಯ ಅಬ್ಬರ ಕೂಡ ಕಡಿಮೆಯಾಗಿದೆ. ಈ ನಡುವೆ ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ, ಚದುರಿದಂತೆ ಮಳೆಯಾಗುತ್ತಿದೆ. ಅ. 1 ರ ಮಂಗಳವಾರ ಸಂಜೆ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ವರ್ಷಧಾರೆಯಾಯಿತು.

ಮಂಗಳವಾರ ಹಗಲು ಬಿಸಿಲಿನ ಬೇಗೆ ಹೆಚ್ಚಿತ್ತು. ಬೇಸಿಗೆಯ ಬಿಸಿಲಿನ ಅನುಭವ ಉಂಟು ಮಾಡಿತ್ತು. ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಭರ್ಜರಿ ಮಳೆಯಾಯಿತು (rain). ಇದು ನಾಗರೀಕರಲ್ಲಿ ನೆಮ್ಮದಿಯ ಭಾವ ಮೂಡುವಂತೆ ಮಾಡಿತು.

ಮುಂದಿನ ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಗುರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಮುಂಗಾರು ಅಂತ್ಯ : ಕಳೆದ ವರ್ಷ ಕೈಕೊಟ್ಟಿದ್ದು ಮುಂಗಾರು ಮಳೆ, ಪ್ರಸ್ತುತ ವರ್ಷ ಉತ್ತಮವಾಗಿ ಬಿದ್ದಿತ್ತು. ಜಿಲ್ಲೆಯ ಬಹುತೇಕ ಜಲಾಶಯ, ಕೆರೆಕಟ್ಟೆಗಳು ಭರ್ತಿಯಾಗಿವೆ. ಉಳಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿತ್ತು.

ಈ ನಡುವೆ ಸೆಪ್ಟೆಂಬರ್ 30 ಕ್ಕೆ ಮುಂಗಾರು ಮಳೆ (monsoon rain) ಅಂತ್ಯಗೊಂಡಿದೆ. ಅಕ್ಟೋಬರ್ 1 ರಿಂದ ಹಿಂಗಾರು ಮಳೆ ಆರಂಭವಾಗಿದೆ.

shimoga : Monsoon season is over. Meanwhile, it has been raining in various parts of the district for the past few days. On Tuesday evening, many parts of the district, including Shimoga city, saw good rain.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →