Cleanliness program in district court premises of Shimoga city on Tuesday ಶಿವಮೊಗ್ಗ : ನ್ಯಾಯಾಲಯ ಆವರಣ ಸ್ವಚ್ಛಗೊಳಿಸಿದ ನ್ಯಾಯಾಧೀಶರುಗಳು

shimoga | ಶಿವಮೊಗ್ಗ : ನ್ಯಾಯಾಲಯ ಆವರಣ ಸ್ವಚ್ಛಗೊಳಿಸಿದ ನ್ಯಾಯಾಧೀಶರು

ಶಿವಮೊಗ್ಗ, ಅ. 1: ಶಿವಮೊಗ್ಗ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಅ. 1 ರ ಮಂಗಳವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನ್ಯಾಯಾಧೀಶರುಗಳು, ನ್ಯಾಯಾಲಯ ಸಿಬ್ಬಂದಿಗಳು, ವಕೀಲರುಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ನ್ಯಾಯಾಲಯದ ಆವರಣದಲ್ಲಿ ಕಸ ಗುಡಿಸಿ ಸ್ವಚ್ಛಗೊಳಿಸುವ ಕಾರ್ಯ ನಡೆಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್,

ಜಿಲ್ಲಾ ನ್ಯಾಯಾಲದ ಎಲ್ಲಾ ನ್ಯಾಯಾಧೀಶರುಗಳು, ಸರ್ಕಾರಿ ಅಭಿಯೋಜಕರುಗಳು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಸದಸ್ಯರು, ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

shivamogga : cleanliness program in district court premises of shimoga city on Tuesday. Judges, court staff, lawyers participated in the cleanup. they cleaned the court premises by sweeping garbage.

A life-sentenced prisoner in Shivamogga Central Jail has died! ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಸಾವು! Previous post shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪುರುಷರ ಶವಗಳು ಪತ್ತೆ!
Monsoon rains are back in full swing in the hills! ಮಲೆನಾಡಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕು! Next post shimog rain | ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ!