sigandur bridge | When will Sigandur Bridge be inaugurated? ಸಿಗಂದೂರು ಸೇತುವೆ ಕಾಮಗಾರಿ ಸಮರೋಪಾದಿ : ಉದ್ಘಾಟನೆ ಯಾವಾಗ?

sigandur bridge | ಸಿಗಂದೂರು ಸೇತುವೆ ಕಾಮಗಾರಿ ಸಮರೋಪಾದಿ : ಉದ್ಘಾಟನೆ ಯಾವಾಗ?

ಸಾಗರ (sagara), ಅ. 7: ಸಾಗರ ತಾಲೂಕಿನ ಸಿಗಂದೂರು ಬಳಿ ಶರಾವತಿ ಹಿನ್ನೀರಿಗೆ ನಿರ್ಮಿಸುತ್ತಿರುವ, ಸೇತುವೆ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಈಗಾಗಲೇ ಸೇತುವೆ ಕಾಮಗಾರಿ ಪೂರ್ಣಗೊಂಡು ಜನ – ವಾಹನ ಸಂಚಾರಕ್ಕೆ ಮುಕ್ತವಾಗಬೇಕಾಗಿತ್ತು. ಆದರೆ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು.

ಈ ನಡುವೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು, ಮುಂದಿನ ಮಾರ್ಚ್ ತಿಂಗಳ ವೇಳೆಗೆ ಸಿಗಂದೂರು ಸೇತುವೆ ಉದ್ಘಾಟನೆಗೊಳ್ಳಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಅ. 6 ರ ಭಾನುವಾರ ಮಾಜಿ ಮುಖ್ಯಮಂತ್ರಿ, ತಂದೆ ಬಿ ಎಸ್ ಯಡಿಯೂರಪ್ಪ (b s yediyurappa) ಅವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಿಗಂದೂರು ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಾತನಾಡಿ, ‘ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾದ ಸಿಗಂದೂರು ಸೇತುವೆ ಕಾಮಗಾರಿ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯ್ತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಿದ್ದು ಬಿ.ಎಸ್.ಯಡಿಯೂರಪ್ಪ ಅವರಾಗಿದ್ದಾರೆ. ಕಾಲಮಿತಿಯೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ವೀಕ್ಷಣೆ : ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ (b y raghavendra) ಅವರು ಸೇತುವೆ ನಿರ್ಮಾಣ ಕಾಮಗಾರಿ ವೀಕ್ಷಣೆ ನಡೆಸಿದರು. ನಿರ್ಮಾಣ ಹಂತದ ಮೇಲುಸ್ತುವಾರಿವಹಿಸಿರುವ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

The bridge work being constructed for Sharavati backwater near Sigandur in Sagar taluk is going on at Samaropadi. If everything had gone as expected, the bridge work should have been completed by now and it should have been open for people and vehicles. But the work was delayed due to various reasons.

Bengaluru : VS Ugrappa is the voice of the voiceless – CM Siddaramaiah ಬೆಂಗಳೂರು : ವಿ.ಎಸ್.ಉಗ್ರಪ್ಪ ಧ್ವನಿ ಇಲ್ಲದವರ ದನಿ – ಸಿಎಂ ಸಿದ್ದರಾಮಯ್ಯ Previous post bengaluru | ಬೆಂಗಳೂರು : ವಿ.ಎಸ್.ಉಗ್ರಪ್ಪ ಧ್ವನಿ ಇಲ್ಲದವರ ದನಿ – ಸಿಎಂ ಸಿದ್ದರಾಮಯ್ಯ
shimoga | Indefinite strike : Shimoga district village administration services are in disarray! ಅನಿರ್ದಿಷ್ಟಾವಧಿ ಮುಷ್ಕರ : ಶಿವಮೊಗ್ಗ ಜಿಲ್ಲೆಯ ಗ್ರಾಮಾಡಳಿತ ಸೇವೆಗಳು ಅಸ್ತವ್ಯಸ್ತ! Next post shimoga | ಅನಿರ್ದಿಷ್ಟಾವಧಿ ಮುಷ್ಕರ : ಶಿವಮೊಗ್ಗ ಜಿಲ್ಲೆಯ ಗ್ರಾಮಾಡಳಿತ ಸೇವೆಗಳು ಅಸ್ತವ್ಯಸ್ತ!