shimoga dasara | ಶಿವಮೊಗ್ಗ ದಸರಾ : ಗಮನ ಸೆಳೆದ ಜಂಬೂ ಸವಾರಿ!

ಶಿವಮೊಗ್ಗ (shivamogga), ಅ. 12: ದಸರಾ ವಿಜಯದಶಮಿ ಅಂಗವಾಗಿ ನಗರದಲ್ಲಿ ಶನಿವಾರ ಮಹಾನಗರ ಪಾಲಿಕೆ ಆಡಳಿತ ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ದೇವರ ಮೂರ್ತಿಯ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು.

ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು ಪ್ರಮುಖ ಆಕರ್ಷಣೆಯಾಗಿದ್ದವು. ಸಾಗರ್ ಆನೆ ಮೇಲೆ ಬೆಳ್ಳಿಯ ಅಂಬಾರಿಯಿಟ್ಟು, ಅದರಲ್ಲಿ ಚಾಮುಂಡೇಶ್ವರಿ ದೇವರ ಮೂರ್ತಿಯ ವಿಗ್ರಹವಿರಿಸಲಾಗಿತ್ತು. ಇದು ನಾಗರೀಕರ ಆಕರ್ಷಣೆಯ ಕೇಂದ್ರಬಿಂಧುವಾಗಿತ್ತು.

ಮೆರವಣಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ನಾನಾ ಕಲಾತಂಡಗಳು ಮೆರವಣಿಗೆಗೆ ಹೊಸ ಕಳೆ ತಂದಿದ್ದವು. ಜೊತೆಗೆ ಶಿವಮೊಗ್ಗ ನಗರ ಹಾಗೂ ಹೊರವಲಯದ ಪ್ರದೇಶಗಳ ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಗೆ ಹೊಸ ಕಳೆ ತಂದಿದ್ದವು.

ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಮೆರವಣಿಗೆ ಸಾಗಿತು. ಫ್ರೀಡಂ ಪಾರ್ಕ್ ನಲ್ಲಿ ಮೆರವಣಿಗೆ ಅಂತ್ಯಗೊಳ್ಳಲಿದೆ. ತಹಶೀಲ್ದಾರ್ ಅವರು ಅಂಬು ಛೇದನ ಮಾಡುವ ಮೂಲಕ ಸಾಂಪ್ರದಾಯಿಕ ಬನ್ನಿ ಮುಡಿಯುವ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಅದ್ಧೂರಿ ಆಚರಣೆ : ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಮಹಾನಗರ ಪಾಲಿಕೆ ಆಡಳಿತದ ಮೂಲಕ, 9 ದಿನಗಳ ಕಾಲ ಅದ್ಧೂರಿಯಾಗಿ ದಸರಾ ಉತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

shimoga : As part of Dussehra Vijayadashami, the procession of Chamundeshwari deity organized by the Mahanagara Corporation was held in a grand manner in the city on Saturday. The three elephants from the Sakrebailu elephant enclosure that participated in the procession were the main attraction. On top of Sagar’s elephant was a silver ambari, in which was placed an idol of Lord Chamundeshwari. It was the center of attraction for citizens.

Citizens of Shimoga beware : Increased turbidity in Tunga river water - advice to boil and drink selected water! ಶಿವಮೊಗ್ಗ : ಹಬ್ಬದ ವೇಳೆ ಕಲುಷಿತ ಕುಡಿಯುವ ನೀರು – ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ! ವರದಿ : ಬಿ. ರೇಣುಕೇಶ್ b renukesha Previous post shimoga | ಶಿವಮೊಗ್ಗ : ಹಬ್ಬದ ವೇಳೆ ಕಲುಷಿತ ಕುಡಿಯುವ ನೀರು – ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ!
shimoga dasara | Shivamogga : Dussehra celebration in the midst of rain! ಶಿವಮೊಗ್ಗ : ಮಳೆಯ ನಡುವೆಯೇ ಸಂಪನ್ನಗೊಂಡ ದಸರಾ ಸಂಭ್ರಮ Next post shimoga dasara | ಶಿವಮೊಗ್ಗ : ಮಳೆಯ ನಡುವೆಯೇ ಸಂಪನ್ನಗೊಂಡ ದಸರಾ ಸಂಭ್ರಮ!