Citizens of Shimoga beware : Increased turbidity in Tunga river water - advice to boil and drink selected water! ಶಿವಮೊಗ್ಗ : ಹಬ್ಬದ ವೇಳೆ ಕಲುಷಿತ ಕುಡಿಯುವ ನೀರು – ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ! ವರದಿ : ಬಿ. ರೇಣುಕೇಶ್ b renukesha

shimoga | ಶಿವಮೊಗ್ಗ : ಹಬ್ಬದ ವೇಳೆ ಕಲುಷಿತ ಕುಡಿಯುವ ನೀರು – ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ!

ಶಿವಮೊಗ್ಗ (shivamogga), ಅ. 12: ಶಿವಮೊಗ್ಗ ನಗರದಲ್ಲಿ ಕಳೆದ ಕೆಲ ದಿನಗಳಿಂದ, ಮಣ್ಣು ಮಿಶ್ರಿತ ಕೆಂಪು ಬಣ್ಣದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ದಸರಾ ಹಬ್ಬದ ವೇಳೆಯೇ ಕಲುಷಿತ ನೀರು ಪೂರೈಕೆಯಾಗುತ್ತಿರುವುದು ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಶಿವಮೊಗ್ಗದ ಸೋಶಿಯಲ್ ಮೀಡಿಯಾ ತಾಣಗಳಲ್ಲಿ ನೀರಿನ ವಿಷಯವೇ ಚರ್ಚೆಯ ಟ್ರೆಂಡಿಂಗ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ!

ಗಾಜನೂರಿನ ತುಂಗಾ ಜಲಾಶಯದಿಂದ, ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ ಕಳೆದ ಅಕ್ಟೋಬರ್ 8 ರ ರಾತ್ರಿ ಬಿದ್ದ ಭಾರೀ ಮಳೆಗೆ ತುಂಗಾ ಡ್ಯಾಂ ನೀರಿನ ಬಣ್ಣ, ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದೆ. ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿದೆ.

ನೀರಿನ ಶುದ್ದೀಕರಣದ ಹೊರತಾಗಿಯೂ ಟರ್ಬಿಡಿಟಿ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿಲ್ಲ. ಕೆಂಪು ಮಿಶ್ರಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ನೀರನ್ನು ಕುದಿಸಿ-ಆರಿಸಿ ಕುಡಿಯುವಂತೆ, ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆ ಮಾಡುತ್ತಿರುವ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇತ್ತೀಚೆಗೆ ಪ್ರಕಟಣೆ ಹೊರಡಿಸಿತ್ತು.

‘ಕಳೆದ ಅಕ್ಟೋಬರ್ 8 ರಂದು ಬಿದ್ದ ಭಾರೀ ಮಳೆಯಿಂದ ಗಾಜನೂರು ತುಂಗಾ ಜಲಾಶಯ ಹಾಗೂ ತುಂಗಾ ನದಿ ನೀರಿನಲ್ಲಿ ಕೆಂಪು ಬಣ್ಣ ಹೆಚ್ಚಾಗಿದೆ. ಟರ್ಬಿಡಿಟಿ ಪ್ರಮಾಣ ಏರಿಕೆಯಾಗಿದೆ.  ಈ ಹಿನ್ನೆಲೆಯಲ್ಲಿ ಪೂರೈಕೆಯಾಗುವ ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ’ ಸಲಹೆ ನೀಡಿತ್ತು.

ಕುಡಿಯಲು ಯೋಗ್ಯವಾದ ನೀರಿನ ಮಾನದಂಡಗಳ ಪ್ರಕಾರ, ನೀರಿನಲ್ಲಿನ ಟರ್ಬಿಡಿಟಿ ಪ್ರಮಾಣ 1 ಎನ್.ಟಿ.ಯು ಇರಬೇಕು. ಆದರೆ ಪ್ರಸ್ತುತ ತುಂಗಾ ನದಿ ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ 5 ಎನ್.ಟಿ.ಯು ಇದೆ ಎಂದು ಹೇಳಲಾಗುತ್ತಿದೆ.

ಟೀಕಾಪ್ರಹಾರ: ನವರಾತ್ರಿ ಹಬ್ಬದ ವೇಳೆಯೇ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು, ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಮನೆಗಳಿಗೆ ಪೂರೈಕೆಯಾಗುತ್ತಿರುವ ನೀರಿನ ಪೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್’ಲೋಡ್ ಮಾಡುತ್ತಿದ್ದಾರೆ. ಆಡಳಿತದ ವಿರುದ್ದ ಕೋಪ ವ್ಯಕ್ತಪಡಿಸುತ್ತಿದ್ದಾರೆ.

‘ಸದ್ಯ ಪೂರೈಕೆಯಾಗುತ್ತಿರುವ ತುಂಗಾ ನದಿ ನೀರು ಕುಡಿಯುವುದಿರಲಿ, ಸ್ನಾನ ಮಾಡಲು ಕೂಡ ಯೋಗ್ಯವಾಗಿಲ್ಲ…’ ಎಂದು ಕೆಲ ನಾಗರೀಕರು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಆಡಳಿತಕ್ಕೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಿಂಗಾರು ಮಳೆ ಸೃಷ್ಟಿಸಿರುವ ಅವಾಂತರದಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ!

From last few days in Shimoga city, red colored drinking water mixed with soil is being supplied. The supply of contaminated water during the dasara festival is a reason for the discontent of the citizens. Currently, the issue of water is the trending topic of discussion on the social media sites of Shimoga, and widespread outrage is being expressed! From the Tunga Reservoir at Gajanur, drinking water is supplied to the city of Shimoga. But the color of Tunga Dam water suddenly turned red due to the heavy rain that fell on the night of October 8. The amount of turbidity in the water has increased.

Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ! Previous post shimoga | ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ – ಹವಾಮಾನ ಇಲಾಖೆ ಮುನ್ಸೂಚನೆಯೇನು?
Next post shimoga dasara | ಶಿವಮೊಗ್ಗ ದಸರಾ : ಗಮನ ಸೆಳೆದ ಜಂಬೂ ಸವಾರಿ!