
shimoga | ಶಿವಮೊಗ್ಗ : ಪೊಲೀಸ್ ಇಲಾಖೆ ವಾಹನಗಳ ಫಿಟ್ನೆಸ್ ಪರಿಶೀಲಿಸಿದ SP!
ಶಿವಮೊಗ್ಗ (shivamogga), ಡಿ. 18: ಜಿಲ್ಲಾ ಪೊಲೀಸ್ ಇಲಾಖೆ ವಾಹನಗಳು ಉತ್ತಮ ಸ್ಥಿತಿಯಲ್ಲಿವೆಯೇ? ಸಂಚಾರಕ್ಕೆ ಯೋಗ್ಯವಾಗಿವೆಯೇ? ಎಂಬುವುದರ ಪರಿಶೀಲನೆಯನ್ನು, ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಡಿ. 18 ರ ಬುಧವಾರ ನಡೆಸಿದರು.
ಡಿಎಆರ್ ಮೈದಾನದ ಆವರಣದಲ್ಲಿ ವಾಹನಗಳ ಪರಿಶೀಲನಾ ಕಾರ್ಯ ನಡೆಯಿತು. ದ್ವಿಚಕ್ರ, ನಾಲ್ಕು ಚಕ್ರ, ಟ್ರಕ್, ಟಿಟಿ ವಾಹನ ಟ್ಯಾಂಕರ್, ಹೆದ್ಧಾರಿ ಗಸ್ತು ಮತ್ತು ಇಆರ್’ಎಸ್ಎಸ್ – 112 ವಾಹನಗಳ ಖುದ್ದು ಪರಿವೀಕ್ಷಣೆಯನ್ನು ಎಸ್ಪಿ ಮಾಡಿದರು.
ವಾಹನಗಳಲ್ಲಿ ಟೂಲ್ ಕಿಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತುರ್ತು ಸಂದರ್ಭಗಳಲ್ಲಿ ಉಪಯೋಗಿಸುವ ಪರಿಕರಗಳಾದ ಹಗ್ಗ, ಟಾರ್ಚ್, ಕಾಷನರಿ ಸೈನ್ ಬೋರ್ಡ್, ರಿಫ್ಲೆಕ್ಟಿವ್ ಜಾಕೆಟ್, ಕೇನ್ ಶೀಲ್ಡ್ ಬಾಡಿ ಪ್ರೊಟೆಕ್ಟರ್ ಗಳು,
ಸೈರನ್, ಪಬ್ಲಿಕ್ ಅಡ್ರೆಸ್ ಸಿಸ್ಟಂ, ನಿಸ್ತಂತು ಉಪಕರಣಗಳು, ಎಮಿಷನ್ ಪರೀಕ್ಷಾ ವರದಿ ಹಾಗೂ ವಾಹನಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿವೆಯೇ ಎಂಬುವುದರ ಸಮಗ್ರ ವಿವರವನ್ನು ಎಸ್ಪಿ ಸಿಬ್ಬಂದಿಗಳಿಂದ ಸಂಗ್ರಹಿಸಿದರು.
ವಾಹನ ಚಾಲಕರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕು. ಪೊಲೀಸ್ ಐಟಿಯಲ್ಲಿ ಲಾಗ್ ಬುಕ್ ಹಾಗೂ ಇಂಡೆಂಟ್ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು. ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಭೇಟಿ : ತದನಂತರ ಡಿಎಆರ್ ಶಿವಮೊಗ್ಗ ಘಟಕದ ಪರಿವೀಕ್ಷಣೆಯನ್ನು ಎಸ್ಪಿ ನಡೆಸಿದರು. ಡಿಎಆರ್ ದಾಖಲಾತಿಗಳು, ಪೊಲೀಸ್ ಕ್ಯಾಂಟೀನ್, ಶಸ್ತ್ರಾಗಾರ, ಎಎಸ್’ಸಿ ತಂಡ, ಡಾಗ್ ಸ್ಕ್ವಾಡ್ ಮತ್ತು ಎಂಟಿ ವಿಭಾಗ ವೀಕ್ಷಿಸಿದರು.
ಇದೇ ವೇಳೆ ಡಿಎಆರ್ ಸಿಬ್ಬಂದಿಗಳ ಕುಂದುಕೊರತೆ ಆಲಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ ಜಿ ಕಾರ್ಯಪ್ಪ, ಡಿಎಆರ್ ಆರ್ ಪಿ ಐ ಪ್ರಶಾಂತ್ ಕುಮಾರ್, ಯೋಗೇಶ್ ಮೊದಲಾದವರು ಉಪಸ್ಥಿತರಿದ್ದರು.
Are the District Police Department vehicles in good condition? Are they roadworthy? The inspection was conducted by SP GK Mithun Kumar on Wednesday, December 18.