The day-long protest held by the Karnataka State Anganwadi Employees' Association since December 17 at the Shimoga District Collector's Office premises demanding the fulfillment of various demands by the Central and State Governments ended on Wednesday.

shimoga | ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ ಅಂತ್ಯ!

ಶಿವಮೊಗ್ಗ (shivamogga), ಡಿ. 18: ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ, ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿ. 17 ರಿಂದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ನಡೆಸುತ್ತಿದ್ದ ಅಹೋರಾತ್ರಿ ಪ್ರತಿಭಟನೆಯು ಬುಧವಾರ ಅಂತ್ಯಗೊಂಡಿದೆ.

ಸಮಗ್ರ ಶಿಶು ಅಭಿವೃದ್ದಿ ಯೋಜನೆ ಆರಂಭಗೊಂಡು 50 ವರ್ಷವಾಗುತ್ತ ಬಂದಿದೆ. ಆದರೆ ಅಂಗನವಾಡಿ ಕೇಂದ್ರಗಳ ಬಲವರ್ಧನೆಯ ಕಾರ್ಯವಾಗಿಲ್ಲ. ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನ್ಯಾಯಯುತ ಬೇಡಿಕೆಗಳು ಈಡೇರಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಮಾಡಿಕೊಂಡು ಬರಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬೇಡಿಕೆಗಳು : ಕಾರ್ಯಕರ್ತೆಯರು – ಸಹಾಯಕಿಯರ ಹುದ್ದೆಗಳನ್ನು ಕಾಯಂಗೊಳಿಸಬೇಕು. ಕೆಲಸಕ್ಕೆ ತಕ್ಕ ವೇತನ ನೀಡಬೇಕು. ಗ್ರಾಚ್ಯಟಿ ಹಣ ಬಿಡುಗಡೆ ಮಾಡಬೇಕು. 26 ಸಾವಿರ ರೂ.ಗಳಿಗೆ ಗೌರವ ಧನ ಹೆಚ್ಚಿಸಬೇಕು. ನಿವೃತ್ತಿ ವೇಳೆ ನೀಡುವ ಸೌಲಭ್ಯ, ವೇತನ ಏರಿಕೆ ಮಾಡಬೇಕು.

ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು. ಎಲ್’ಕೆಜಿ – ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು. ಕಾರ್ಯಕರ್ತೆಯರು, ಸಹಾಯಕಿಯರನ್ನು ಚುನಾವಣಾ ಕೆಲಸಕಾರ್ಯಗಳಿಗೆ ನಿಯೋಜಿಸಬಾರದು. ಮುಂಬಡ್ತಿ ಸೌಲಭ್ಯ ಕಲ್ಪಿಸಬೇಕು. ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಬೇಕು.  

ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳಾಗಿ ಮಾರ್ಪಡಿಸಬೇಕು. ಪೂರಕ ಪೌಷ್ಠಿಕ ಆಹಾರದ ಬದಲು ಪೂರ್ಣ ಪ್ರಮಾಣದ ಆಹಾರ ನೀಡುವ ವ್ಯವಸ್ಥೆಯಾಗಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶೈಲಜಾ ಶಿಕಾರಿಪುರ, ತುಳುಸಿಪ್ರಭಾ, ಜಯಲಕ್ಷ್ಮೀ, ಶ್ಯಾಮಲಾ, ಮಂಜುಳ, ಸಿಐಟಿಯು ಸಂಘಟನೆ ಖಜಾಂಚಿಯಾದ ಕೆ ಪ್ರಭಾಕರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

The day-long protest held by the Karnataka State Anganwadi Employees’ Association since December 17 at the Shimoga District Collector’s Office premises demanding the fulfillment of various demands by the Central and State Governments ended on Wednesday.

shivamogga | Shimoga : SP checked the fitness of police department vehicles! ಶಿವಮೊಗ್ಗ : ಪೊಲೀಸ್ ಇಲಾಖೆ ವಾಹನಗಳ ಫಿಟ್ನೆಸ್ ಪರಿಶೀಲಿಸಿದ ಎಸ್ಪಿ Previous post shimoga | ಶಿವಮೊಗ್ಗ : ಪೊಲೀಸ್ ಇಲಾಖೆ ವಾಹನಗಳ ಫಿಟ್ನೆಸ್ ಪರಿಶೀಲಿಸಿದ SP!
shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ? Next post shimoga | ಶಿವಮೊಗ್ಗ ತಾಲೂಕಿನ ವಿವಿಧೆಡೆ ಡಿ. 20 ರಂದು ವಿದ್ಯುತ್ ವ್ಯತ್ಯಯ!