ಹೊಸನಗರ (hosangar), ಡಿ. 24: ಬೈಕ್ ನಿಂದ ಕೆಳಕ್ಕೆ ಬಿದ್ದು ರಕ್ತಸ್ರಾವಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸವಾರನಿಗೆ, ಹೆದ್ಧಾರಿ ಗಸ್ತು ವಾಹನದ ಪೊಲೀಸರು ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಘಟನೆ, ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ. 24 ರ ಮುಂಜಾನೆ ನಡೆದಿದೆ.
ಹೊಸನಗರ ಪೊಲೀಸ್ ಠಾಣೆಯ ಎಎಸ್ಐ ಗಣಪತಿ ರಾವ್ ಹಾಗೂ ಶಿವಮೊಗ್ಗ ಡಿಎಆರ್ ಪಿಎಪಿಸಿ ಗಿರೀಶ್ ಎಂ ಎಂಬುವರೇ, ಸಂಕಷ್ಟದಲ್ಲಿದ್ದ ಬೈಕ್ ಸವಾರನಿಗೆ ನೆರವಾದ ಜೀವ ರಕ್ಷಕ ಪೊಲೀಸರಾಗಿದ್ದಾರೆ.
ಘಟನೆ ಹಿನ್ನೆಲೆ : ರಾತ್ರಿ ವೇಳೆ ಹೆದ್ಧಾರಿ ಗಸ್ತು ವಾಹನದಲ್ಲಿ ಸದರಿ ಪೊಲೀಸರಿಬ್ಬರು ಕಾರ್ಯನಿರ್ವಹಣೆ ಮಾಡುತ್ತಿದ್ದರು. ಗವಟೂರು ಕಾಡಿನ ರಾಜ್ಯ ಹೆದ್ಧಾರಿಯಲ್ಲಿ,, ಬೈಕ್ ಸವಾರನೋರ್ವ ರಸ್ತೆ ಬದಿ ಬಿದ್ದಿರುವುದು ಇವರ ಗಮನಕ್ಕೆ ಬಂದಿತ್ತು. ಪರಿಶೀಲಿಸಿದ ವೇಳೆ ರಕ್ತಸ್ರಾವವಾಗುತ್ತಿರುವುದು ಹಾಗೂ ಪ್ರಜ್ಞೆ ತಪ್ಪಿರುವುದು ಗಮನಕ್ಕೆ ಬಂದಿದೆ.
ಸವಾರನಿಗೆ ಸ್ಥಳದಲ್ಲಿಯೇ ಪೊಲೀಸ್ ವಾಹನದಲ್ಲಿದ್ದ ಪ್ರಥಮ ಚಿಕಿತ್ಸಾ ಕಿಟ್ ಸಹಾಯದಿಂದ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಪೊಲೀಸ್ ವಾಹನದಲ್ಲಿಯೇ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬೈಕ್ ಸವಾರನನ್ನು, ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ,. ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೊಬೈಲ್ ಪೋನ್ ನೆರವಿನಿಂದ ಬೈಕ್ ಚಾಲಕನ ಪೂರ್ವಾಪರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ರಿಪ್ಪನ್ ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ನಿವಾಸಿ ಭಾಸ್ಕರ್ ಆಚಾರ್ (30) ಎಂಬುವುದು ಗೊತ್ತಾಗಿದ್ದು, ಅವರ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಮೆಚ್ಚುಗೆ : ಹೊಸನಗರ ಪೊಲೀಸ್ ಠಾಣೆಯ ಎಎಸ್ಐ ಗಣಪತಿ ರಾವ್ ಹಾಗೂ ಶಿವಮೊಗ್ಗ ಡಿಎಆರ್ ಪಿಎಪಿಸಿ ಗಿರೀಶ್ ಎಂ ಅವರ, ಸಕಾಲಿಕ ನೆರವಿನಹಸ್ತಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
Hosnagar, D. 24: The incident took place in the early morning of December 24 in the area of Rippon Pette Police Station of Hosanagar taluk where the police of highway patrol vehicle gave first aid to the rider who fell down from the bike and was bleeding and was in an unconscious state.
Hosanagar police station ASI Ganapathi Rao and Shimoga DAR PAPC Girish M were the life saving policemen who helped the biker who was in distress.

