shimoga | Shimoga - New Year Tragedy: Two killed in a road accident! shimoga | ಶಿವಮೊಗ್ಗ - ಹೊಸ ವರ್ಷದ ವೇಳೆ ನಡೆದ ದುರಂತ : ರಸ್ತೆ ಅಪಘಾತದಲ್ಲಿ ಇಬ್ಬರು ಸಾವು!

shimoga | ಶಿವಮೊಗ್ಗ – ಹೊಸ ವರ್ಷದ ವೇಳೆ ನಡೆದ ದುರಂತ : ರಸ್ತೆ ಅಪಘಾತದಲ್ಲಿ ಇಬ್ಬರು ಸಾ*ವು!

ಶಿವಮೊಗ್ಗ (shivamogga), ಜ. 1: ಹೊಸ ವರ್ಷದ ವೇಳೆ, ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ, ಯುವಕ ಹಾಗೂ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಘಟನೆ 1: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ, ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವರು ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ. ಸಿದ್ದಯ್ಯ ರಸ್ತೆ ಸರ್ಕಲ್ ಬಳಿ ಘಟನೆ ನಡೆದಿದೆ.

ಗೋಪಾಳದ ನಿವಾಸಿ ಧನುಷ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಪ್ರಜ್ವಲ್ (21) ಗಾಯಗೊಂಡ ಯುವಕನಾಗಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಕಾರು ಪಲ್ಟಿಯಾಗಿದೆ. ಆದರೆ ಕಾರಿನಲ್ಲಿದ್ದವರು ಅನಾಹುತದಿಂದ ಪಾರಾಗಿದ್ಧಾರೆ. ಇವರು ಸಾಗರ ರಸ್ತೆಯ ಪೊಲೀಸ್ ಲೇಔಟ್ ಸಮೀಪದ ನಿವಾಸಿಗಳೆಂದು ಹೇಳಲಾಗಿದೆ.

ತಡರಾತ್ರಿಯೇ ಘಟನಾ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಘಟನೆಯ ಕುರಿತಂತೆ ಇನ್ನಷ್ಟೆ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಬೇಕಾಗಿದೆ.

ಘಟನೆ 2: ನಗರದ ರಾಯಲ್ ಆರ್ಕಿಡ್ ಹೋಟೆಲ್ ಸಮೀಪ ಜ. 1 ರ ಮುಂಜಾನೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ, ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿ ಮಹಿಳೆ ಓರ್ವರು ಮೃತಪಟ್ಟ ಘಟನೆ ನಡೆದಿದೆ.

ರೇಣುಕಮ್ಮ (70) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಇನ್ನಷ್ಟೆ ಟ್ರಾಫಿಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಬೇಕಾಗಿದೆ.

During the New Year, a young man and a woman died in two separate road accidents in Shimoga city’s west traffic police station area. #accidentnews, #newyear, #newyearaccidentnews, #shimogaaccidentnews, #shimogaaccident,

Shimoga: Police request to find the bike driver who ran away after the accident! ಶಿವಮೊಗ್ಗ : ಅಪಘಾತ ನಡೆಸಿ ಪರಾರಿಯಾದ ಬೈಕ್ ಚಾಲಕನ ಪತ್ತೆಗೆ ಪೊಲೀಸರ ಮನವಿ! Previous post shimoga | ಶಿವಮೊಗ್ಗ : ಅಪಘಾತ ನಡೆಸಿ ಪರಾರಿಯಾದ ಬೈಕ್ ಚಾಲಕನ ಪತ್ತೆಗೆ ಪೊಲೀಸರ ಮನವಿ!
What did CM Siddaramaiah say to IAS-IPS-IRS-IFS officers? IAS–IPS-IRS-IFS ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? Next post IAS–IPS-IRS-IFS ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?