Shimoga: Police request to find the bike driver who ran away after the accident! ಶಿವಮೊಗ್ಗ : ಅಪಘಾತ ನಡೆಸಿ ಪರಾರಿಯಾದ ಬೈಕ್ ಚಾಲಕನ ಪತ್ತೆಗೆ ಪೊಲೀಸರ ಮನವಿ!

shimoga | ಶಿವಮೊಗ್ಗ : ಅಪಘಾತ ನಡೆಸಿ ಪರಾರಿಯಾದ ಬೈಕ್ ಚಾಲಕನ ಪತ್ತೆಗೆ ಪೊಲೀಸರ ಮನವಿ!

ಶಿವಮೊಗ್ಗ (shivamogga), ಡಿ. 31: ಶಿವಮೊಗ್ಗ ನಗರದಲ್ಲಿ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ, ಮತ್ತೊಂದು ಬೈಕ್ ಚಾಲಕನ ಪತ್ತೆಗೆ ಸಹಕರಿಸಲು ಪಶ್ಚಿಮ ಟ್ರಾಫಿಕ್ ಠಾಣೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ರಾಫಿಕ್ ಪೊಲೀಸರು ಡಿ. 31 ರಂದು ಪರಾರಿಯಾದ ಬೈಕ್ ಚಾಲಕನ, ಸಿ ಸಿ ಕ್ಯಾಮರಾದಲ್ಲಿ ಸಂಗ್ರಹವಾದ ವೀಡಿಯೋದ ಫೋಟೊ ಬಿಡುಗಡೆ ಮಾಡಿದ್ದಾರೆ. ಪತ್ತೆಗೆ ಸಹಕರಿಸಲು ನಾಗರೀಕರಿಗೆ ಕೋರಿದ್ದಾರೆ.

ಘಟನೆ ಹಿನ್ನೆಲೆ : ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಕಳೆದ ಡಿಸೆಂಬರ್ 12 ರಂದು ಸದರಿ ಅಪಘಾತ ಸಂಭವಿಸಿತ್ತು.

ಅಪರಿಚಿತ ಬೈಕ್ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಆಗಮಿಸಿ, ಕೆಎ-14 ಇಎ 2425 ಹೀರೋ ಹೊಂಡ ಕಂಪೆನಿಯ ಪ್ಯಾಷನ್ ಪ್ರೋ ಬೈಕ್ ಸವಾರರಾದ ಎನ್ ಮಂಜುನಾಥ್ ಅವರಿಗೆ ಡಿಕ್ಕಿ ಹೊಡೆಸಿದ್ದ. ನಂತರ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದ.

ಆರೋಪಿತ ಬೈಕ್ ಸವಾರನ ಮೋಟಾರ್ ಬೈಕ್ ನಂಬರ್ ಕಾಣಿಸಿರಲಿಲ್ಲ. ಆದರೆ ಆರೋಪಿಯು ಬೈಕ್ ನಲ್ಲಿ ಹೋಗುತ್ತಿರುವ ಭಾವಚಿತ್ರ ದೊರಕಿತ್ತು.

ಸದರಿ ಭಾವಚಿತ್ರದಲ್ಲಿರುವ ವ್ಯಕ್ತಿಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ, ಪಶ್ಚಿಮ ಸಂಚಾರ ಪೊಲೀಸ್ ಠಾಣೆ ದೂ. ಸಂ. 08182 261417 ಅಥವಾ ಮೊ.ನಂ 9480803346 ಗೆ ಮಾಹಿತಿ ನೀಡುವಂತೆ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shimoga, D. 31: West Traffic Station police has appealed to the public to help find the driver of another bike who ran away without stopping after colliding with a bike in Shimoga city.

In this regard, the traffic police has released the photo of the video collected in the CC camera of the absconding bike driver. Citizens have been requested to cooperate in the search.

If anyone finds the clue of the person in the said photograph, West Traffic Police Station No. no. 08182 261417 or Mo. No. 9480803346 to inform the police sub-inspector said in a press release.

shimoga | Shimoga: Massive agitation for Aadhaar correction by school children from January 2 ಶಿವಮೊಗ್ಗ : ಜನವರಿ 2 ರಿಂದ ಶಾಲಾ ಮಕ್ಕಳ ಆಧಾರ್ ತಿದ್ದುಪಡಿಯ ಬೃಹತ್ ಆಂದೋಲನ Previous post shimoga | ಶಿವಮೊಗ್ಗ : ಜನವರಿ 2 ರಿಂದ ಶಾಲಾ ಮಕ್ಕಳ ಆಧಾರ್ ತಿದ್ದುಪಡಿಯ ಬೃಹತ್ ಆಂದೋಲನ
shimoga | Shimoga - New Year Tragedy: Two killed in a road accident! shimoga | ಶಿವಮೊಗ್ಗ - ಹೊಸ ವರ್ಷದ ವೇಳೆ ನಡೆದ ದುರಂತ : ರಸ್ತೆ ಅಪಘಾತದಲ್ಲಿ ಇಬ್ಬರು ಸಾವು! Next post shimoga | ಶಿವಮೊಗ್ಗ – ಹೊಸ ವರ್ಷದ ವೇಳೆ ನಡೆದ ದುರಂತ : ರಸ್ತೆ ಅಪಘಾತದಲ್ಲಿ ಇಬ್ಬರು ಸಾ*ವು!