shimoga | Under the leadership of Shivamogga Tahsildar the encroachment clearance operation under tight police guard! shimoga |ಶಿವಮೊಗ್ಗ ತಹಶೀಲ್ದಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಪಹರೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ!

shimoga | ಶಿವಮೊಗ್ಗ ತಹಶೀಲ್ದಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಪಹರೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ!

ಶಿವಮೊಗ್ಗ (shivamogga), ಫೆ. 14: ಬಿಗಿ ಪೊಲೀಸ್ ಪಹರೆಯಲ್ಲಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು, ಫೆ. 14 ರಂದು ಶಿವಮೊಗ್ಗ ಹೊರವಲಯ ಸೋಗಾನೆ ಸಮೀಪ ತಾಲೂಕು ಆಡಳಿತ ನಡೆಸಿತು.

ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದಲ್ಲಿ ಸದರಿ ಕಾರ್ಯಾಚರಣೆ ನಡೆಸಲಾಗಿದೆ. ಜೆಸಿಬಿ ಮೂಲಕ ಜಮೀನಿನಲ್ಲಿ ಬೆಳೆದಿದ್ದ ಅಡಕೆ ಗಿಡ ಹಾಗೂ ಇತರೆ ಬೆಳೆಗಳನ್ನು ತೆರವುಗೊಳಿಸಲಾಗಿದೆ. ಈ ವೇಳೆ ತಾಲೂಕು ಆಡಳಿತ, ಕಂದಾಯ ಇಲಾಖೆ ಅಧಿಕಾರಿ – ಸಿಬ್ಬಂದಿಗಳು ಉಪಸ್ಥಿತರಿದ್ದರು.

ಒತ್ತುವರಿ : ತಹಶೀಲ್ದಾರ್ ವಿ ಎಸ್ ರಾಜೀವ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸೋಗಾನೆ ಗ್ರಾಮದ ಸರ್ವೇ ನಂಬರ್ 120 ಹಾಗೂ ಮಂಡನೇಕೊಪ್ಪಗ್ರಾಮದ ಸ.ನಂ. 243 ರಲ್ಲಿದ್ದ 1 ಎಕರೆ 37 ಗುಂಟೆ ಸರ್ಕಾರಿ ಜಾಗ ಒತ್ತುವರಿಯಾಗಿತ್ತು.

ಸದರಿ ಜಾಗವನ್ನು ಪಶು ಸಂಗೋಪನಾ ಇಲಾಖೆಗೆ 2018 ರಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿತ್ತು. ಸದರಿ ಜಾಗದಲ್ಲಿ ಪಶು ಆಸ್ಪತ್ರೆ, ತರಬೇತಿ ಕೇಂದ್ರ, ಕಚೇರಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿತ್ತು.

ಆದರೆ ಕೆಲವರು ಸದರಿ ಜಾಗ ಒತ್ತುವರಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಸದರಿ ಜಾಗ ವಶಕ್ಕೆ ಪಡೆದು, ಪಶು ಸಂಗೋಪನಾ ಇಲಾಖೆ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಡ್ಡಿ : ತೆರವು ಕಾರ್ಯಾಚರಣೆಗೆ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದವರು ಅಡ್ಡಿಪಡಿಸಲು ಯತ್ನಿಸಿದರು. ಜೆಸಿಬಿಗೆ ಅಡ್ಡ ನಿಲ್ಲಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Shimoga, Feb 14: Taluk administration conducted a government land encroachment eviction drive near Sogane on the outskirts of Shimoga on Feb 14 under heavy police force.

Theoperation was conducted under the leadership of Tahsildar V S Rajiv. The plants and other crops grown in the farm were cleared by JCB. On this occasion, Taluk administration, revenue department officers and staff were present.

Shivamogga: There will be no electricity in these areas on October 15th! ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ! Previous post shimoga | ಶಿವಮೊಗ್ಗ : ಕಲ್ಲಳ್ಳಿ ಸುತ್ತಮುತ್ತ ಫೆ.15 ರಂದು ವಿದ್ಯುತ್ ವ್ಯತ್ಯಯ
shimoga | Shimoga: Pipe thieves caught on CC camera – will the police notice anything else? shimoga | ಶಿವಮೊಗ್ಗ : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಪೈಪ್ ಕಳ್ಳರು – ಇನ್ನಾದರೂ ಗಮನಿಸುವರೆ ಪೊಲೀಸರು? Next post shimoga | ಶಿವಮೊಗ್ಗ : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಪೈಪ್ ಕಳ್ಳರು – ಇನ್ನಾದರೂ ಗಮನಿಸುವರೆ ಪೊಲೀಸರು?