shimoga | Shimoga: Pipe thieves caught on CC camera – will the police notice anything else? shimoga | ಶಿವಮೊಗ್ಗ : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಪೈಪ್ ಕಳ್ಳರು – ಇನ್ನಾದರೂ ಗಮನಿಸುವರೆ ಪೊಲೀಸರು?

shimoga | ಶಿವಮೊಗ್ಗ : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಪೈಪ್ ಕಳ್ಳರು – ಇನ್ನಾದರೂ ಗಮನಿಸುವರೆ ಪೊಲೀಸರು?

ಶಿವಮೊಗ್ಗ (shivamogga), ಫೆ. 15: ಶಿವಮೊಗ್ಗ ನಗರದ ಹೊರವಲಯ ಕೆಹೆಚ್’ಬಿ ಪ್ರೆಸ್ ಕಾಲೋನಿಯ ಓವರ್ ಹೆಡ್ ಟ್ಯಾಂಕ್ ಬಳಿ, ಇಬ್ಬರು ಅಪರಿಚಿತರು ಬೈಕ್ ನಲ್ಲಿ ನೀರಿನ ಪೈಪ್ ಕಳವು ಮಾಡಿ ಕೊಂಡೊಯ್ಯುತ್ತಿರುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ!

ಕಳೆದ ಕೆಲ ತಿಂಗಳುಗಳಿಂದ, ಸದರಿ ಓವರ್ ಹೆಡ್ ಟ್ಯಾಂಕ್ ಬಳಿ ನಿರಂತರವಾಗಿ ಕಳವು ಕೃತ್ಯಗಳು ವರದಿಯಾಗಿದ್ದವು. ನೀರಿನ ಮೋಟಾರ್ ಪಂಪ್ ಸೆಟ್, ಪೈಪ್ ಗಳು, ಕಬ್ಬಿಣದ ಸಾಮಗ್ರಿಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿತ್ತು.

ಇದರಿಂದ ಕುಡಿಯುವ ನೀರು ಪೂರೈಕೆ ಅಸ್ತವ್ಯಸ್ತವಾಗುವಂತಾಗಿತ್ತು. ಈ ಕುರಿತಂತೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿರಲಿಲ್ಲ. ಮತ್ತೊಂದೆಡೆ, ಕಳ್ಳರ ಉಪಟಳ ಮತ್ತಷ್ಟು ಹೆಚ್ಚಾಗಿತ್ತು. ಮತ್ತೆ ಪೈಪ್ ಮತ್ತೀತರ ವಸ್ತುಗಳನ್ನು ಕಳವು ಮಾಡಿದ್ದರು.

ಕಳ್ಳರ ಕಾಟದಿಂದ ಬೇಸತ್ತ ಪಿಡಿಓ ರಾಜಪ್ಪ ಅವರು, ಓವರ್ ಹೆಡ್ ಟ್ಯಾಂಕ್ ಬಳಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದರು. ಫೆ. 12 ರ ಮಧ್ಯಾಹ್ನದ ವೇಳೆ, ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಆಗಮಿಸಿ, ಹಾಡಹಗಲೇ ಟ್ಯಾಂಕ್ ಬಳಿಯಿದ್ದ ಪೈಪ್ ಗಳನ್ನು ಕೊಂಡೊಯ್ದಿದ್ದಾರೆ.

ಸದರಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನಾದರೂ ವಿನೋಬನಗರ ಠಾಣೆ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

*** ‘ಕೆಹೆಚ್’ಬಿ ಪ್ರೆಸ್ ಕಾಲೋನಿಯ ಓವರ್ ಹೆಡ್ ಟ್ಯಾಂಕ್ ಬಳಿ ನಿರಂತರವಾಗಿ ಪೈಪ್ ಮತ್ತೀತರ ವಸ್ತುಗಳ ಕಳವು ಕೃತ್ಯಗಳು ನಡೆಯುತ್ತಿದ್ದವು. ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇಲ್ಲಿಯವರೆಗೂ ಆರೋಪಿಗಳು ಹಾಗೂ ಕಳವು ಮಾಲು ಪತ್ತೆಯಾಗಿಲ್ಲ. ಈ ಕಾರಣದಿಂದ ಓವರ್ ಹೆಡ್ ಟ್ಯಾಂಕ್ ಬಳಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಇತ್ತೀಚೆಗೆ ಸದರಿ ಟ್ಯಾಂಕ್ ಬಳಿ ಇಬ್ಬರು ಅನಾಮಧೇಯ ವ್ಯಕ್ತಿಗಳು ಪೈಪ್ ಕಳವು ಮಾಡಿದ್ದಾರೆ. ಸದರಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ಪೊಲೀಸರಿಗೆ ನೀಡಲಾಗುವುದು’ ಎಂದು ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಅವರು ಫೆ. 15 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.  

Shimoga February 15: Near the overhead tank of KH’B Press Colony, outskirts of Shimoga city, the scene of two unknown persons stealing water pipe on a bike and taking it away was captured on CC camera!

The scene was captured on the CC camera. Local residents have demanded that the Vinobanagar police should take action to track down the thieves.

shimoga | Under the leadership of Shivamogga Tahsildar the encroachment clearance operation under tight police guard! shimoga |ಶಿವಮೊಗ್ಗ ತಹಶೀಲ್ದಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಪಹರೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ! Previous post shimoga | ಶಿವಮೊಗ್ಗ ತಹಶೀಲ್ದಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಪಹರೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ!
Kumbh Mela: Special train service between Shimoga and Banaras shimoga train to kumbamela | ಕುಂಭಮೇಳ : ಶಿವಮೊಗ್ಗ – ಬನಾರಸ್ ನಡುವೆ ವಿಶೇಷ ರೈಲು ಸಂಚಾರ! Next post shimoga train to kumbh mela | ಪ್ರಯಾಗ್ ರಾಜ್ ಕುಂಭಮೇಳ : ಶಿವಮೊಗ್ಗ – ಬನಾರಸ್ ನಡುವೆ ವಿಶೇಷ ರೈಲು ಸಂಚಾರ!