
bhadravati | ಭದ್ರಾವತಿಯಲ್ಲಿ ಇದೇನಿದು..? : ಹಾಡಹಗಲೇ ರಸ್ತೆಯಲ್ಲಿಯೇ ಲಾಂಗ್, ದೊಣ್ಣೆಗಳಿಂದ ಹೊಡೆದಾಡಿಕೊಂಡ ಎರಡು ಗುಂಪುಗಳು!
ಭದ್ರಾವತಿ (bhadravathi), ಫೆ. 18: ಇತ್ತೀಚೆಗೆ ಭದ್ರಾವತಿ ನಗರದ ಭದ್ರಾ ನದಿಯಲ್ಲಿ ನಡೆಯುತ್ತಿದ್ದ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾದ ಮಹಿಳಾ ಅಧಿಕಾರಿಗೆ, ದಂಧೆಕೋರರು ಜೀವ ಬೆದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು.
ಸದರಿ ಪ್ರಕರಣ ಇನ್ನೂ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಈ ನಡುವೆ ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಯುವಕರ ಎರಡು ಗುಂಪುಗಳು,, ಹಾಡಹಗಲೇ ಜನನಿಬಿಡ ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ವೀಡಿಯೋವೊಂದು ವೈರಲ್ ಆಗಿದೆ! ಆದರೆ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ!
ಕಳೆದ ಫೆಬ್ರವರಿ 9 ರಂದು ಸದರಿ ಮಾರಾಮಾರಿ ಘಟನೆ ನಡೆದಿದೆ ಎನ್ನಲಾಗಿದೆ. ಭದ್ರಾವತಿ ಪಟ್ಟಣದ ಉಜ್ಜನಿಪುರ ಸರ್ಕಲ್ ನಲ್ಲಿ ಘಟನೆ ನಡೆದಿದೆ. ಲಾಂಗ್, ದೊಣ್ಣೆಗಳಿಂದ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ. ಕಲ್ಲು ತೂರಾಟ ಕೂಡ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.
ಓಸಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಹೊಡೆದಾಟವು ಸಮೀಪದ ಕಟ್ಟಡಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಘಟನೆ ನಡೆದ ಹಲವು ದಿನಗಳ ನಂತರ ಸದರಿ ಮಾರಾಮಾರಿ ವೀಡಿಯೋ ವೈರಲ್ ಆಗಿದೆ.
ಸಾರ್ವಜನಿಕ ಸ್ಥಳದಲ್ಲಿಯೇ ಇಷ್ಟೆಲ್ಲ ರಾದ್ಧಾಂತ ನಡೆದರೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸರು ಯಾರ ವಿರುದ್ಧವೂ ಕ್ರಮಕೈಗೊಳ್ಳದಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ.
ಒಟ್ಟಾರೆ ಸದರಿ ಗ್ಯಾಂಗ್ ವಾರ್ ಪ್ರಕರಣದಿಂದ ಮತ್ತೊಮ್ಮೆ ಭದ್ರಾವತಿ ನಗರದ ಕಾನೂನು – ಸುವ್ಯವಸ್ಥೆಯ ವಿಷಯವು ಚರ್ಚೆಯ ಮುನ್ನೆಲೆಗೆ ಬರುವಂತಾಗಿದೆ.
Bhadravati, Feb 18: Recently, the case of a woman officer who came forward to stop the illegal sand trade in Bhadra river in Bhadravati city, the traffickers threatened her life and abused her with unintelligible words. this incident made noise across the state.
The case is still hot in the public mind. Meanwhile, a video of two groups of youths fighting on a busy road in Bhadravati city has gone viral! But information is available that no complaint has been filed in the police station in this regard!
It is said that the incident took place on February 9. The incident took place in Ujjanipur circle of Bhadravati town. two groups fought with sticks, stones and lethal weapons.