ಭದ್ರಾವತಿ (bhadravati), ಫೆಬ್ರವರಿ 08: ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣದಲ್ಲಿ, ಮೂವರು ಮಹಿಳೆಯರಿಗೆ ಭದ್ರಾವತಿ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಫೆಬ್ರವರಿ 07 ರಂದು ತೀರ್ಪು ನೀಡಿದೆ.
ಭದ್ರಾವತಿಯ ಜೇಡಿಕಟ್ಟೆ ನಿವಾಸಿ ಚಂದ್ರಕಲಾ ಯಾನೆ ಶ್ವೇತಾ (31), ಉಜ್ಜನಿಪುರದ ನಿವಾಸಿ ಶಿಲ್ಪಾ (35) ಹಾಗೂ ಹೊಸ ಸಿದ್ದಾಪುರದ ನಿವಾಸಿ ಕವಿತಾ (40) ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ.
ಜೈಲು ಶಿಕ್ಷೆಯ ಜೊತೆಗೆ 1.61 ಲಕ್ಷ ರೂ. ದಂಡ ವಿಧಿಸಲಾಗಿದೆ. ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 24/12/2021 ರಂದು ಭದ್ರಾವತಿಯ ಉಜ್ಜನಿಪುರದ ಮಾರಿಯಮ್ಮ ದೇವಾಲಯ ಹಿಂಭಾಗದ 3 ನೇ ಕ್ರಾಸ್ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ದೂರಿನ ಮೇರೆಗೆ, ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು.
ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಇನ್ಸ್’ಪೆ್ಕ್ಟರ್ ಆಗಿದ್ದ ಮಂಜುನಾಥ್ ಇ ಓ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Bhadravathi : 10 Years Rigorous Imprisonment for Three Women!
Bhadravati, February 08: In a case of conducting prostitution, the Bhadravati 4th Additional District and Sessions Court has sentenced three women to 10 years of rigorous imprisonment.
The convicted are identified as: Chandrakala alias Shwetha (31), resident of Hosuru Jedikatte, Bhadravati, Shilpa (35), resident of Ujjanipura, Kavitha (40), resident of Hosa Siddapura.
Along with the prison sentence, a fine of ₹1.61 lakh has been imposed. The verdict was delivered by Judge Indira Mailaswami Chettiar. Ratnamma P argued on behalf of the government.
Case Background: Based on a complaint that prostitution was being conducted in a house located at 3rd Cross behind Mariyamma Temple in Ujjanipura, Bhadravati, a police team led by IPS officer Jitendra Kumar Dayama carried out a raid. The case was registered at Paper Town Police Station. At that time, Inspector Manjunath E.O. investigated the matter and filed the charge sheet in court.

