bhadravati news | ಭದ್ರಾವತಿ ವೃದ್ದ ದಂಪತಿ ಕೊಲೆ ಪ್ರಕರಣ : ಆಯುರ್ವೇದಿಕ್ ವೈದ್ಯನ ಬಂಧನ!

Bhadravati Elderly Couple Murder Case: Ayurvedic Doctor Arrested! ಭದ್ರಾವತಿ ವೃದ್ದ ದಂಪತಿ ಕೊಲೆ ಪ್ರಕರಣ : ಆಯುರ್ವೇದಿಕ್ ವೈದ್ಯನ ಬಂಧನ!

ಶಿವಮೊಗ್ಗ (shivamogga), ಜನವರಿ 21: ಭದ್ರಾವತಿ ನಗರದ ಭೂತನಗುಡಿಯ ಮನೆಯಲ್ಲಿಯೇ ವೃದ್ದ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟ ನಿಗೂಢ ಪ್ರಕರಣವನ್ನು, ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಭೇದಿಸಿದ್ದು, ದಂಪತಿಯನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಸಮೀಪದ ಸಂಬಂಧಿಯೂ ಆಗಿರುವ ಆಯುರ್ವೇದ ವೈದ್ಯನನ್ನು ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮಲ್ಲೇಶ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯು ಕೊಲೆಗೀಡಾದ ವೃದ್ದ ಚಂದ್ರಪ್ಪರ ಸ್ವಂತ ತಮ್ಮನ ಮಗನಾಗಿದ್ದಾನೆ.

ಈ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಬುಧವಾರ ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆರೋಪಿ ಮಲ್ಲೇಶ್ ವೃದ್ದ ದಂಪತಿ ಬಳಿ 15 ಲಕ್ಷ ರೂ. ಸಾಲ ಕೇಳಿದ್ದ. ಆದರೆ ದಂಪತಿ ಕೊಟ್ಟಿರಲಿಲ್ಲ.

ಮಂಡಿ ನೋವಿಗೆ ಇಂಜೆಕ್ಷನ್ ನೀಡುವುದಾಗಿ ಮಲ್ಲೇಶ್ ಮನೆಗೆ ಆಗಮಿಸಿದ್ದಾನೆ. ಅದರಂತೆ ಇಬ್ಬರಿಗೂ ತಲಾ 50 ಎಂಜಿ ಅನೆಸ್ತೇಷಿಯಾ (ಅರಿವಳಿಕೆ) ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ. ನಂತರ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.

ಭದ್ರಾವತಿ ನಗರದ ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ (80) ಹಾಗೂ ಅವರ ಪತ್ನಿ ಜಯಮ್ಮ (70) ಅನುಮಾನಾಸ್ಪದವಾಗಿ ಮನೆಯಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಚಂದ್ರಪ್ಪ ಅವರು ಮನೆಯ ಬೆಡ್ ರೂಂ ಮಂಚದ ಮೇಲೆ ಹಾಗೂ ಜಯಮ್ಮರವರು ಹಾಲ್ ನ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿತ್ತು.

ದಂಪತಿಗೆ ಮೂವರು ಪುತ್ರರಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಭೂತನಗುಡಿ ಮನೆಯಲ್ಲಿ ದಂಪತಿ ನೆಲೆಸಿದ್ದರು. ಜನವರಿ 20 ರಂದು ಬೆಳಿಗ್ಗೆ ಎಂದಿನಂತೆ ಪುತ್ರರು ಅವರ ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿಲ್ಲ. ಮಧ್ಯಾಹ್ನ ಸ್ಥಳೀಯರು ಮನೆಗೆ ತೆರಳಿದಾಗ ದಂಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.

ದಂಪತಿ ಮೈಮೇಲಿದ್ದ ಹಾಗೂ ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವು ಮಾಡಲಾಗಿತ್ತು. ಈ ಕಾರಣದಿಂದ ದಂಪತಿ ಸಾವಿನ ಸುತ್ತ ನಿಗೂಢತೆ ಆವರಿಸಿತ್ತು. ಸಾಕಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿತ್ತು. ಮರಣೋತ್ತರ ಪರೀಕ್ಷೆಗಾಗಿ, ಶವಗಳನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಶವಾಗಾರಕ್ಕೆ ರವಾನಿಸಲಾಗಿತ್ತು. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು.

Bhadravati Elderly Couple Murder Case : Ayurvedic Doctor Arrested! | Shivamogga, January 21: The mysterious case of the suspicious death of an elderly couple at their residence in Bhuthanagudi, Bhadravati city, has been solved by the Bhadravati Old Town Police. A relative, who is also an Ayurvedic doctor, has been arrested on charges of murdering the couple. The accused has been identified as Dr. Mallesh, who was working in a private hospital. He is the son of the younger brother of the deceased Chandrappa. District Superintendent of Police Nikhil B provided details at a press conference held in Shivamogga on Wednesday. According to him, the accused Mallesh had asked the elderly couple for a loan of ₹15 lakh, which they refused to give.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →