ಭದ್ರಾವತಿ (bhadravathi), ಜನವರಿ 21: ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಅರೆಬಿಳಚಿ ಕ್ಯಾಂಪ್ ನಲ್ಲಿ ಇತ್ತೀಚೆಗೆ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜನವರಿ 21 ರ ಬೆಳಿಗ್ಗೆ ನಾಲೆಯಲ್ಲಿ ಎರಡನೇ ಶವ ಪತ್ತೆಯಾಗಿದೆ.
ಎಸ್.ಡಿ.ಆರ್.ಎಫ್ ತಂಡದ ಶೋಧ ಕಾರ್ಯಾಚರಣೆ ವೇಳೆ, ನೀಲಾಬಾಯಿ (50) ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಕಳೆದ ಜನವರಿ 18 ರಂದು ಭದ್ರಾ ನಾಲೆಯಲ್ಲಿ ಬಟ್ಟೆ ಒಗೆಯಲೆಂದು ನೀಲಾಬಾಯಿ, ಅವರ ಪುತ್ರ ರವಿ (24), ಪುತ್ರಿ ಶ್ವೇತಾ (35) ಹಾಗೂ ಅಳಿಯ ಪರಶುರಾಮ್ (40) ಎಂಬುವರು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ನಾಲ್ವರು ಕೂಡ ನೀರಿನಲ್ಲಿ ಮುಳುಗಿದ್ದರು.
ಅಂದಿನಿಂದ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭದ್ರಾವತಿ ಅಗ್ನಿಶಾಮಕ ದಳ, ಮುಳುಗು ತಜ್ಞ ಮಲ್ಪೆ ಈಶ್ವರ್ ತಂಡ ಹಾಗೂ ಎಸ್.ಡಿ.ಆರ್.ಎಫ್ ತಂಡಗಳು ಶೋಧ ಕಾರ್ಯಾದಲ್ಲಿ ಭಾಗಿಯಾಗಿವೆ.
ಸೋಮವಾರ ಯುವಕ ರವಿ ಶವ ಪತ್ತೆಯಾಗಿತ್ತು. ಮಂಗಳವಾರದ ಶೋಧದ ವೇಳೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಬುಧವಾರ ಬೆಳಿಗ್ಗೆ ನೀಲಾಬಾಯಿ ಅವರ ಶವ ಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ.
Bhadrā River Incident: Four Members of a Family Missing – Second Body Found!
Bhadravati, January 21: The search operation continues in connection with the recent case of four members of the same family who went missing near Arabhilachi Camp, close to Holehonnur in Bhadravati taluk. On the morning of January 21, the second body was recovered from the river.
During the SDRF team’s search operation, the body of a woman named Neelabai (50) was found and sent for post-mortem examination.
On January 18, Neelabai, her son Ravi (24), daughter Shwetha (35), and son-in-law Parashuram (40) had gone to the Bhadrā River to wash clothes. At that time, all four accidentally drowned in the water.
Since then, search operations have been ongoing. The Bhadravati Fire Department, expert diver Malpe Ishwar’s team, and the SDRF team have been involved in the rescue efforts.
On Monday, the body of young man Ravi was found. On Tuesday, no clues were discovered during the search. On Wednesday morning, Neelabai’s body was recovered, and the search operation is continuing.

