Shivamogga: Criminal steals women's mangal sutra ಶಿವಮೊಗ್ಗ : ವಾಕಿಂಗ್ ತೆರಳಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ!

bhadravati | ಭದ್ರಾವತಿ : ಪತಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಿಸಿದ ಸರಗಳ್ಳರು!

ಭದ್ರಾವತಿ (bhadravathi), ಫೆ. 23: ಪತಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರವನ್ನು, ಮತ್ತೊಂದು ಬೈಕ್ ನಲ್ಲಿ ಆಗಮಿಸಿದ ಇಬ್ಬರು ಸರಗಳ್ಳರು ಅಪಹರಿಸಿ ಪರಾರಿಯಾದ ಘಟನೆ ಭದ್ರಾವತಿ ನಗರದ ಹೊರವಲಯ ಬೈಪಾಸ್ ರಸ್ತೆ ಬಳಿ ನಡೆದಿದೆ.

ಹಿರಿಯೂರು ವೀರಾಪುರದ ನಿವಾಸಿ ಹನುಮಂತೇಗೌಡ ಎಂಬುವರ ಪತ್ನಿ ಭಾಗ್ಯಮ್ಮ (62) ಎಂಬುವರೇ, ಮಾಂಗಲ್ಯ ಸರ ಕಳೆದುಕೊಂಡವರೆಂದು ಗುರುತಿಸಲಾಗಿದೆ. ಕಳುವಾದ ಸರ 35 ಗ್ರಾಂ ತೂಕದ್ದಾಗಿದ್ದು, 1.75 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.

ಫೆ. 20 ರಂದು ಭದ್ರಾವತಿ ಪಟ್ಟಣದ ನ್ಯೂ ಕಾಲೋನಿಯಲ್ಲಿರುವ ಸಂಬಂಧಿಯೋರ್ವರ ಮನೆಗೆ ಬೈಕ್ ನಲ್ಲಿ ದಂಪತಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ ಮನೆಗೆ ಹಿಂದಿರುಗುವಾಗ, ರಾತ್ರಿ 9. 30 ರ ಸುಮಾರಿಗೆ ಮಲೆ ಮಹದೇಶ್ವರ ದೇವಾಲಯ ರಸ್ತೆಯ ಬೈಪಾಸ್ ರಸ್ತೆ ಬಳಿ ಹನುಮಂತೇಗೌಡ ಅವರು ಬೈಕ್ ನ್ನು ನಿಧಾನಗೊಳಿಸಿದ್ದಾರೆ.

ಈ ವೇಳೆ ಹಿಂಬದಿಯಿಂದ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಸರಗಳ್ಳರು, ಹನುಮಂತೇಗೌಡ ಪತ್ನಿಯ ಮಾಂಗಲ್ಯ ಸರ ಕಿತ್ತುಕೊಂಡು ಶಿವಮೊಗ್ಗದ ಕಡೆ ಪರಾರಿಯಾಗಿದ್ದಾರೆ. ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Bhadravati, Feb 23: An incident took place near Veerapura on the outskirts of Bhadravati city where two robbers who arrived on another bike kidnapped the gold chain of a woman who was traveling on a bike with her husband.

At this time, two robbers who arrived on a bike from behind, snatched Hanumante Gowda’s wife’s Mangalya sare and escaped towards Shimoga. A case has been registered in this regard at New Town Police Station. Police are continuing to investigate.

Employing children under the age of 14 and employing minors under the age of 18 in hazardous industries is a punishable offense. Previous post shikaripur | ಶಿಕಾರಿಪುರ – ಆಟೋಮೊಬೈಲ್ ಶಾಪ್ ಮೇಲೆ ದಾಳಿ : ಕಿಶೋರ ಕಾರ್ಮಿಕ ಪತ್ತೆ
india vs pakistan | Cricket: Great victory for India against Pakistan! india vs pakistan | ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ! Next post india vs pakistan | ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!