shimoga | ಶಿವಮೊಗ್ಗ : ಹೊನ್ನಾವರದ ಕತಗಾಲದ ಬಳಿ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕಪ್ಪು ಚಿರತೆ ಮರಿಯ ಸಂರಕ್ಷಣೆ!

shimoga | ಶಿವಮೊಗ್ಗ : ಹೊನ್ನಾವರದ ಕತಗಾಲದ ಬಳಿ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕಪ್ಪು ಚಿರತೆ ಮರಿಯ ಸಂರಕ್ಷಣೆ!

ಶಿವಮೊಗ್ಗ (shivamogga), ಫೆ. 26: ಶಿವಮೊಗ್ಗ ತ್ಯಾವರೆಕೊಪ್ಪ ಹುಲಿ-ಸಿಂಹಾಧಾಮಕ್ಕೆ ಹೊಸ ಅತಿಥಿಯೊಂದರ ಆಗಮನವಾಗಿದೆ. ತಾಯಿಯಿಂದ ಬೇರ್ಪಟ್ಟು ಆಹಾರವಿಲ್ಲದೆ ನಿತ್ರಾಣಗೊಂಡಿದ್ದ, ಕಪ್ಪು ಬಣ್ಣದ ಚಿರತೆ ಮರಿಯೊಂದನ್ನು ತಂದು ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ಕಾರವಾರ ಜಿಲ್ಲೆ ಹೊನ್ನಾವರ ತಾಲೂಕಿನ ಕತಗಾಲ ಅರಣ್ಯ ವಲಯದಲ್ಲಿ, ಸರಿಸುಮಾರು ಒಂದು ವರ್ಷ ವಯೋಮಾನದ ಚಿರತೆ ಮರಿ ಕಾಣಿಸಿಕೊಂಡಿತ್ತು. ಕಳೆದ ಕೆಲ ದಿನಗಳ ಹಿಂದೆಯೇ ತಾಯಿಯಿಂದ ಮರಿ ಬೇರ್ಪಟ್ಟಿದ್ದು, ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ಹೊನ್ನಾವರ – ಕುಮಟ ನಡುವಿನ ರಸ್ತೆಯ ಸೇತುವೆಯೊಂದರ ಬಳಿ ಮಲಗಿಕೊಂಡಿತ್ತು.

ಇದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯ ಡಿಸಿಎಫ್ ಯೋಗೀಶ್ ಹಾಗೂ ಮತ್ತವರ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಚಿರತೆ ಮರಿ ರಕ್ಷಣೆ ಕ್ರಮಕೈಗೊಂಡಿದ್ದರು. ಶಿವಮೊಗ್ಗ ತ್ಯಾವರೆಕೊಪ್ಪ ಸಿಂಹಾಧಾಮದ ವೈದ್ಯಾಧಿಕಾರಿ ಡಾ. ಮುರುಳಿ ಮನೋಹರ್ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದರು.

ಡಾ. ಮುರುಳಿ ಮನೋಹರ್ ನೇತೃತ್ವದ ತಂಡ ಅರವಳಿಕೆ ಮದ್ದು ನೀಡಿ ಸುರಕ್ಷಿತವಾಗಿ ಚಿರತೆ ಮರಿಯನ್ನು ರಕ್ಷಿಸಿ, ತ್ಯಾವರೆಕೊಪ್ಪ ಹುಲಿ-ಸಿಂಹಾಧಾಮಕ್ಕೆ ತಂದಿದೆ. ಸದ್ಯ ಚಿರತೆ ಮರಿಗೆ ಆರೈಕೆ ನಡೆಯುತ್ತಿದೆ. ಈಗಾಗಲೇ ಲಯನ್ ಸಫಾರಿಯಲ್ಲಿ ಮಿಂಚು ಹೆಸರಿನ ಹೆಣ್ಣು ಕರಿ ಚಿರತೆಯಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂಧುವಾಗಿದೆ.

Shimoga, Feb 26: A new guest has arrived at the tyavarekoppa lion and tiger safari in Shimoga. A black leopard, separated from its mother and starving without food, is being brought in for treatment. A leopard cub, approximately one year old, was spotted in Katgala forest zone of Honnavar taluk of Karwar district yesterday. The cub was separated from its mother a few days ago and was starving without food. It was lying near a bridge on the road between Honnavara and Kumata.

The public noticed this and informed the forest department. Forest Department DCF Yogeesh and other personnel reached the spot and took action to save the leopard cub. Dr. Muruli Manohar, Medical Officer of Shivamogga tyavarekoppa lion and tiger safari, was called to the spot.

Shimoga: Farmer's Association's outrage against the finance that locked the house! shimoga : ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ! Previous post shimoga : ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ!
Woman's body found in Bhadra River in Bhadravati city! ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ! Next post holehonnuru | ಹೊಳೆಹೊನ್ನೂರು : ಹನುಮಂತಾಪುರದಲ್ಲಿ ವ್ಯಕ್ತಿಯ ಕೊಲೆ – ಶಂಕಿತ ಪೊಲೀಸ್ ವಶಕ್ಕೆ!