
shimoga | ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ದರೋಡೆ ಪ್ರಕರಣ : ನಾಲ್ವರ ಬಂಧನ!
ಶಿವಮೊಗ್ಗ (shivamogga), ಮಾ 1: ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದ ಬಳಿ ವ್ಯಕ್ತಿಯೋರ್ವರಿಂದ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಯನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಜುನಾಥ ಬಡಾವಣೆ ನಿವಾಸಿ ಜಬೀರ್ (25), ಬೊಮ್ಮನಕಟ್ಟೆ ಬಡಾವಣೆ ನಿವಾಸಿಗಳಾದ ಅಬ್ರಹಾರ್ ಯಾನೆ ಮಹಮ್ಮದ್ ಸಮೀವುಲ್ಲಾ (22), ಅಂಜನೇಯ (22) ಹಾಗೂ ಆರ್.ಎಂ.ಎಲ್ ನಗರದ ನಿವಾಸಿ ಸೈಯದ್ ನೇಮನ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಳವು ಮಾಡಲಾಗಿದ್ದ 15 ಗ್ರಾಂ ತೂಕದ ಬ್ರಾಸ್ ಲೈಟ್ ಹಾಗೂ ಕೃತ್ಯಕ್ಕೆ ಬಳಕೆಯಾದ ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ಸ್’ಪೆಕ್ಟರ್ ಸಿದ್ದೇಗೌಡ, ಸಬ್ ಇನ್ಸ್’ಪೆಕ್ಟರ್ ನವೀನ್ ಎಂ ಹೆಚ್, ಕೋಮಲ ಬಿ ಆರ್, ಸಿಬ್ಬಂದಿಗಳಾದ ನಾಗರಾಜ್, ವಸಂತ, ಸಚಿನ್, ವೀರೇಶ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ.
ಪ್ರಕರಣದ ಹಿನ್ನೆಲೆ : ಕಳೆದ ಫೆ. 19 ರಂದು ರಾತ್ರಿ ಕೃಷಿ ನಗರ ನಿವಾಸಿ ಜಯದೇವಪ್ಪ (66) ಎಂಬುವರು ವ್ಯಕ್ತಿಯೋರ್ವರೊಂದಿಗೆ ಮುಖ್ಯ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ತಮ್ಮ ದ್ವಿಚಕ್ರ ವಾಹನದಲ್ಲಿ ಹಿಂದಿರುಗಲು ಮುಂದಾದ ವೇಳೆ, ಆರೋಪಿಗಳು ಎದುರಾಗಿದ್ದರು.
ಈ ವೇಳೆ ಅವರಿಗೆ ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ, ಅವರ ಕೈಯಲ್ಲಿದ್ದ ಬ್ರಾಸ್ ಲೈಟ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Shimoga, March 1: In connection with the case of robbery of gold jewelery from a person near the main railway station of Shimoga city, the Jayanagar police station has arrested four accused. The police have seized a 15 gram brass light worth Rs 1.20 lakh stolen from the accused and the auto used in the crime. The police team led by Inspector Siddegowda was successful in arresting the accused.