
shimoga | ಶಿವಮೊಗ್ಗ : ಮಾ. 3 ರಿಂದ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ!
ಶಿವಮೊಗ್ಗ (shivamogga), ಮಾ. 2: ನೇರ ನೇಮಕಾತಿಗೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘವು, ಮಾರ್ಚ್ 3 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದೆ.
ಪಾಲಿಕೆಯಲ್ಲಿ ಕಳೆದ ಸರಿಸುಮಾರು 15 ರಿಂದ 20 ವರ್ಷಗಳಿಂದ, 116 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದರಲ್ಲಿ ನೀರುಗಂಟಿ, ನೀರು ಸರಬರಾಜು ಸಹಾಯಕರಾಗಿ ವಿವಿಧ ವೃಂದದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಶಿವಮೊಗ್ಗ ನಗರದಲ್ಲಿ 24*7 ಕುಡಿಯುವ ನೀರು ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ, ಕರ್ನಾಟಕ ನೀರು ಸರಬರಾಜು ಮಂಡಳಿಗೆ ನೌಕರರನ್ನು ಹಸ್ತಾಂತರಿಸಲಾಗಿದೆ. ಅತ್ಯಂತ ದಕ್ಷತೆ, ಪ್ರಾಮಾಣಿಕತೆಯಿಂದ ಹಗಲು – ರಾತ್ರಿಗಳ ಪರಿವೆಯೇ ಇಲ್ಲದೆ, ರಜಾ ದಿನಗಳ ವೇಳೆಯು ನೌಕರರು ಕಾರ್ಯನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ.
ಕೊರೊನಾ ವೇಳೆಯು, ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದರೆ ಹೊರಗುತ್ತಿಗೆ ನೌಕರರಿಗೆ ಯಾವುದೇ ಜೀವನಾಂಶ, ಉದ್ಯೋಗದ ಭದ್ರತೆಯಿಲ್ಲವಾಗಿದೆ. ಇದರಿಂದ ನೌಕರರು ಕುಟುಂಬ ನಿರ್ವಹಣೆ ಸಂಕಷ್ಟಕರವಾಗಿ ಪರಿಣಮಿಸಿದೆ ಎಂದು ಸಂಘಟನೆ ತಿಳಿಸಿದೆ.
ಸರ್ಕಾರವು ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ / ನೇರ ಪಾವತಿ ವ್ಯವಸ್ಥೆಯಡಿ ನೇಮಿಸಿಕೊಳ್ಳಲು, ಜಿಲ್ಲಾ ನಗರಾಭಿವೃದ್ದಿ ಕೋಶದಿಂದ ಮಾಹಿತಿ ಪಡೆದುಕೊಂಡಿದೆ. ಆದರೆ ಇಲ್ಲಿಯವರೆಗೂ ಆದೇಶವಾಗಿಲ್ಲ. ಕೇವಲ ಕಡತಗಳಿಗಷ್ಟೆ ಸೀಮಿತವಾಗಿದೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ (ಬಿಬಿಎಂಪಿ – ಮೈಸೂರು) ಕಾರ್ಯನಿರ್ವಹಿಸುತ್ತಿರುವ ನೌಕರರು, 2019-20 ರಲ್ಲಿ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು. ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿ, 8 ವಾರಗಳೊಳಗೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಿತ್ತು. ಇದರ ಹೊರತಾಗಿಯೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮಾರ್ಚ್ 3 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಸ್ಥಗಿತಗೊಳಿಸುವುದಿಲ್ಲ ಎಂದು ಸಂಘಟನೆ ತಿಳಿಸಿದೆ.
Shimoga, March 2: The Shimoga Municipal Corporation Outsourced Water Supply Employees Union has staged an indefinite round-the-clock protest since March 3, demanding direct recruitment.
Government has received information from District Urban Development Cell to recruit water supply employees under direct recruitment / direct payment system. But till now there is no order. The organization expressed displeasure that it was limited to only files.