
shimoga | ಶಿವಮೊಗ್ಗ : ಆಯನೂರು ಬಸ್ ನಿಲ್ದಾಣ ಬಳಿ ಕುಸಿದು ಬಿದ್ದ ವ್ಯಕ್ತಿ ಸಾವು!
ಶಿವಮೊಗ್ಗ (shivamogga), ಮಾ. 3: ಕುಸಿದು ಬಿದ್ದ ಸ್ಥಳದಲ್ಲಿಯೇ ಅಪರಿಚಿತ ಪುರುಷರೋರ್ವರು ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಆಯನೂರು ಬಸ್ ನಿಲ್ದಾಣ ಸಮೀಪದ ಮೆಡಿಕಲ್ ಶಾಪ್ ಎದುರು ನಡೆದಿದೆ.
ಈ ಕುರಿತಂತೆ ಪೊಲೀಸ್ ಇಲಾಖೆಯು ಮಾರ್ಚ್ 3 ರಂದು ಪ್ರಕಟಣೆ ಬಿಡುಗಡೆ ಮಾಡಿದೆ. ವ್ಯಕ್ತಿಯು ಕುಸಿದು ಬಿದ್ದ ಕೂಡಲೇ, ಸಾರ್ವಜನಿಕರು ಆಂಬುಲೆನ್ಸ್ ಗೆ ಪೋನ್ ಮಾಡಿ ಸ್ತಳಕ್ಕೆ ಕರೆಯಿಸಿದ್ದಾರೆ. ಆಂಬುಲೆನ್ಸ್ ಸಿಬ್ಬಂದಿಗಳು ತಪಾಸಣೆ ನಡೆಸಿದ್ದು, ವ್ಯಕ್ತಿಯೂ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಮೃತ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಯಾವುದೇ ಪೂರ್ವಾಪರಗಳ ಮಾಹಿತಿ ಲಭ್ಯವಾಗಿಲ್ಲ. ಸುಮಾರು 55 ರಿಂದ 60 ವರ್ಷ ವಯೋಮಾನವಿದೆ. ಶವವನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ಮೃತರ ವಾರಸ್ಸುದಾರರು ಯಾರಾದರೂ ಇದ್ದಲ್ಲಿ, ಕುಂಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182 262332, ಡಿ ವೈ ಎಸ್ ಪಿ ಶಿವಮೊಗ್ಗ 08182 261412, ಶಿವಮೊಗ್ಗ ಕಂಟ್ರೋಲ್ ರೂಂ 08182 261413 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shimoga, March 3: An unidentified man died at the spot where he collapsed. The incident took place in front of a medical shop near Ayanur bus stand in Shimoga taluk. In this regard, the police department issued a notification on March 3.
If there are any heirs of the deceased, they can contact Kumsi Police Station Phone Number : 08182 262332, DYSP Shimoga 08182 261412, Shimoga Control Room 08182 261413, the release said.