shimoga | Shimoga Water Supply Outsourced Employees Strike Begins: Daily Water Supply Not Affected! shimoga | ಶಿವಮೊಗ್ಗ ನೀರು ಸರಬರಾಜು ಹೊರ ಗುತ್ತಿಗೆ ನೌಕರರ ಮುಷ್ಕರ ಆರಂಭ : ದೈನಂದಿನ ನೀರು ಪೂರೈಕೆ ಮೇಲೆ ಪರಿಣಾಮವಿಲ್ಲ!

shimoga | ಶಿವಮೊಗ್ಗ ನೀರು ಸರಬರಾಜು ಹೊರ ಗುತ್ತಿಗೆ ನೌಕರರ ಮುಷ್ಕರ ಆರಂಭ : ದೈನಂದಿನ ನೀರು ಪೂರೈಕೆ ಮೇಲೆ ಪರಿಣಾಮವಿಲ್ಲ!

ಶಿವಮೊಗ್ಗ (shivamogga), ಮಾ 3: ನೇರ ನೇಮಕಾತಿಗೆ ಆಗ್ರಹಿಸಿ, ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘವು, ಮಾರ್ಚ್ 3 ರಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ ಮುಷ್ಕರ ಆರಂಭಿಸಿದೆ.

ಬೆಳಿಗ್ಗೆ ಪಾಲಿಕೆ ಕಚೇರಿ ಆವರಣದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಜಲ ಮಂಡಳಿ ಕಚೇರಿವರೆಗೆ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಕಚೇರಿ ಆವರಣದಲ್ಲಿಯೇ ಧರಣಿ ಆರಂಭಿಸಿದ್ದಾರೆ.

ಬೇಡಿಕೆಯೇನು? : ಪಾಲಿಕೆಯಲ್ಲಿ ಕಳೆದ ಸರಿಸುಮಾರು 15 ರಿಂದ 20 ವರ್ಷಗಳಿಂದ, 116 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದರಲ್ಲಿ ನೀರುಗಂಟಿ, ನೀರು ಸರಬರಾಜು ಸಹಾಯಕರಾಗಿ ವಿವಿಧ ವೃಂದದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಶಿವಮೊಗ್ಗ ನಗರದಲ್ಲಿ 24*7 ಕುಡಿಯುವ ನೀರು ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ, ಕರ್ನಾಟಕ ನೀರು ಸರಬರಾಜು ಮಂಡಳಿಗೆ ನೌಕರರನ್ನು ಹಸ್ತಾಂತರಿಸಲಾಗಿದೆ. ಅತ್ಯಂತ ದಕ್ಷತೆ, ಪ್ರಾಮಾಣಿಕತೆಯಿಂದ ಹಗಲು – ರಾತ್ರಿಗಳ ಪರಿವೆಯೇ ಇಲ್ಲದೆ, ರಜಾ ದಿನಗಳ ವೇಳೆಯು ನೌಕರರು ಕೆಲಸ ಮಾಡುತ್ತಿದ್ದಾರೆ.

ಕೊರೊನಾ ವೇಳೆಯು ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಆದರೆ ಹೊರಗುತ್ತಿಗೆ ನೌಕರರಿಗೆ ಯಾವುದೇ ಜೀವನಾಂಶ, ಉದ್ಯೋಗದ ಭದ್ರತೆಯಿಲ್ಲವಾಗಿದೆ. ಇದರಿಂದ ನೌಕರರು ಕುಟುಂಬ ನಿರ್ವಹಣೆ ಸಂಕಷ್ಟಕರವಾಗಿ ಪರಿಣಮಿಸಿದೆ ಎಂದು ಸಂಘಟನೆ ತಿಳಿಸಿದೆ.

ಸರ್ಕಾರವು ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ / ನೇರ ಪಾವತಿ ವ್ಯವಸ್ಥೆಯಡಿ ನೇಮಿಸಿಕೊಳ್ಳಲು, ಜಿಲ್ಲಾ ನಗರಾಭಿವೃದ್ದಿ ಕೋಶದಿಂದ ಮಾಹಿತಿ ಪಡೆದುಕೊಂಡಿದೆ. ಆದರೆ ಇಲ್ಲಿಯವರೆಗೂ ಆದೇಶವಾಗಿಲ್ಲ. ಕೇವಲ ಕಡತಗಳಿಗಷ್ಟೆ ಸೀಮಿತವಾಗಿದೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮಾರ್ಚ್ 3 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಸ್ಥಗಿತಗೊಳಿಸುವುದಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ಸರಾಗ : ನಾಗರೀಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ನೌಕರರು ಎಂದಿನಂತೆ ಶಿವಮೊಗ್ಗ ನಗರಾದ್ಯಂತ ಕುಡಿಯುವ ನೀರು ಸರಬರಾಜು ಕಾರ್ಯ ನಡೆಸಿದ್ದಾರೆ. ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಂಡಿದ್ದಾರೆ. ನೌಕರರ ಜನಪರ ಕಾಳಜಿಗೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

Shimoga, March 3: The Shimoga Municipal Corporation Outsourced Water Supply Employees Union has started an indefinite round-the-clock strike from March 3, demanding direct recruitment.

In the morning, the employees took out a protest march from the Dr B R Ambedkar statue in the corporation office premises to the water Board office. Later they started a protest in the office premises.

shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ? Previous post shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ – ಮಾ. 5 ರಂದು ವಿದ್ಯುತ್ ವ್ಯತ್ಯಯ!
Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ! Next post shimoga | ಶಿವಮೊಗ್ಗ : ಆಯನೂರು ಬಸ್ ನಿಲ್ದಾಣ ಬಳಿ ಕುಸಿದು ಬಿದ್ದ ವ್ಯಕ್ತಿ ಸಾವು!