Bhadravati police arrest notorious rowdy sheeter from Shivamogga by shooting him in the leg! ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಭದ್ರಾವತಿ ಪೊಲೀಸರು!

shimoga | ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಭದ್ರಾವತಿ ಪೊಲೀಸರು!

ಭದ್ರಾವತಿ, ಮಾ.25: ಬಂಧಿಸಲು ತೆರಳಿದ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಶಿವಮೊಗ್ಗದ ರೌಡಿ ಶೀಟರ್‌ ಕಡೇಕಲ್‌ ಹಬೀದ್‌ ಕಾಲಿಗೆ, ಭದ್ರಾವತಿ ಪೇಪರ್‌ ಟೌನ್‌ ಠಾಣೆ ಇನ್ಸ್‌ಪೆಕ್ಟರ್‌ ನಾಗಮ್ಮ ಅವರು ಗುಂಡು ಹಾರಿಸಿ ಬಂಧಿಸಿದ ಘಟನೆ ಮಾರ್ಚ್ 25 ರಂದು ಸಂಜೆ ಭದ್ರಾವತಿಯಲ್ಲಿ ನಡೆದಿದೆ.

ಗುಂಡೇಟಿಗೆ ತುತ್ತಾದ ಆರೋಪಿ ಕಡೇಕಲ್ ಹಬೀದ್ ನನ್ನು ಹಾಗೂ ಈತನ ದಾಳಿಯಿಂದ ಗಾಯಗೊಂಡ ಇಬ್ಬರು ಪೊಲೀಸ್ ಪೇದೆಗಳನ್ನು, ಭದ್ರಾವತಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೇಕಲ್ ಹಬೀದ್ ಶಿವಮೊಗ್ಗ ತುಂಗಾ ನಗರ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದಾನೆ.

ಕಳೆದ ತಿಂಗಳು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವ್ಯಕ್ತಿಯೋರ್ವರ ಕೊಲೆ ಯತ್ನ ಪ್ರಕರಣದರಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್‌ ಕಡೇಕಲ್‌ ಹಬೀದ್‌ ತಲೆ ಮರೆಸಿಕೊಂಡಿದ್ದ.

ಕಳೆದ ಒಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಶೋಧಿಸುತ್ತಿದ್ದರು. ಇಂದು ಈತ ಭದ್ರಾವತಿಯಲ್ಲಿ ಇರುವಿಕೆಯ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಇನ್ಸ್‌ಪೆಕ್ಟರ್‌ ನಾಗಮ್ಮ ನೇತೃತ್ವದ ತಂಡ ಬಂಧಿಸಲು ತೆರಳಿತ್ತು. ಈ ವೇಳೆ ಆರೋಪಿಯು ಪೊಲೀಸ್‌ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ನಾಗಮ್ಮ ಅವರ ಮೇಲೆ ದಾಳಿಗೆ ಮುಂದಾಗಿದ್ದಾನೆ.

ತಕ್ಷಣವೇ ಇನ್ಸ್‌ಪೆಕ್ಟರ್‌ ನಾಗಮ್ಮ ಅವರು ಕಡೇಕಲ್‌ ಹಬೀದ್‌ನ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಡೇಕಲ್‌ ಹಬೀದ್‌ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ರಾಬರಿ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಒಟ್ಟು 20 ಪ್ರಕರಣಗಳಿವೆ ಎಂದು ಎಸ್ಪಿ ಅವರು ತಿಳಿಸಿದ್ದಾರೆ.

Bhadravati, March 25: Bhadravati Paper Town Police Station Inspector Nagamma shot and arrested Kadekal Habid, a rowdy sheeter from Shivamogga, who was trying to escape after attacking the police who had gone to arrest him, on the evening of March 25 in Bhadravati.

The accused Kadekal Habid, who was shot and injured in the attack, and the two police constables who were injured in his attack, have been admitted to the Bhadravati City Government Hospital. Kadekal Habid is a rowdy sheeter under the jurisdiction of Tunga Nagar police station in Shimoga.

shimoga taluk rain | ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಮಳೆ! Previous post shimoga taluk rain | ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಮಳೆ!
shimoga | Bhadravati - Channagiri - Chikkajajur new railway line: Railway Board approves final survey! shimoga | ಭದ್ರಾವತಿ - ಚನ್ನಗಿರಿ - ಚಿಕ್ಕಜಾಜೂರು ನೂತನ ರೈಲು ಮಾರ್ಗ : ಅಂತಿಮ ಸಮೀಕ್ಷೆಗೆ ರೈಲ್ವೆ ಮಂಡಳಿ ಒಪ್ಪಿಗೆ! Next post shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ರೈಲ್ವೆ ಹಳಿಗಳ ಬಳಿ ಮಹಿಳೆ, ಇಬ್ಬರು ಯುವಕರ ಶವ ಪತ್ತೆ!