
shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ರೈಲ್ವೆ ಹಳಿಗಳ ಬಳಿ ಮಹಿಳೆ, ಇಬ್ಬರು ಯುವಕರ ಶವ ಪತ್ತೆ!
ಶಿವಮೊಗ್ಗ (shivamogga), ಮಾ. 26: ಪ್ರತ್ಯೇಕ ಘಟನೆಗಳಲ್ಲಿ, ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳ ರೈಲ್ವೆ ಹಳಿ ಸಮೀಪ, ಓರ್ವ ಮಹಿಳೆ ಹಾಗೂ ಇಬ್ಬರು ಯುವಕರ ಶವಗಳು ಪತ್ತೆಯಾದ ಘಟನೆ ನಡೆದಿದೆ.
ಈ ಕುರಿತಂತೆ ಮಾರ್ಚ್ 25 ರಂದು ರೈಲ್ವೆ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ಮೃತರ ಹೆಸರು, ವಿಳಾ ಸೇರಿದಂತೆ ಯಾವುದೇ ಪೂರ್ವಾಪರಗಳ ಮಾಹಿತಿ ಲಭ್ಯವಾಗಿಲ್ಲ. ಮೃತರ ವಾರಸುದಾರರ ಪತ್ತೆಗೆ ಸಾರ್ವಜನಿಕರು ಸಹಕಾರಕ್ಕೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಪ್ರಕರಣ 1 : ನಗರ ಮತ್ತು ಹಳೆ ರೈಲ್ವೆ ನಿಲ್ದಾಣಗಳ ನಡುವಿನ ವೇದಿಕೆ ನಂ.1 ರಲ್ಲಿ, ಸುಮಾರು 30 ರಿಂದ 35 ವರ್ಷ ವಯಸ್ಸಿನ ಯುವಕನ ಮೃತದೇಹ ಪತ್ತೆಯಾಗಿದೆ. ಹೆಸರು, ವಿಳಾಸ ತಿಳಿದುಬಂದಿಲ್ಲ. ಮೃತ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ.
02 ಇಂಚು ಉದ್ದ ತಲೆಗೂದಲು, ಉದ್ದ ಗಡ್ಡ ಮೀಸೆ ಬಿಟ್ಟಿರುತ್ತಾರೆ. ಮೈಮೇಲೆ ನೇರಳೆ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮೃತನ ಬಲಗಾಲು ಅಂಗವೈಕಲ್ಯತೆಯಿಂದ ಕೂಡಿದೆ.
ಪ್ರಕರಣ 2 : ನಗರದ ಸವಳಂಗ ರಸ್ತೆ ರೈಲ್ವೆ ಗೇಟ್ ಸಮೀಪ ರೈಲು ಹಳಿಗಳ ಪಕ್ಕದಲ್ಲಿ ಸುಮಾರು 40 ರಿಂದ 45 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದೆ. ಮೃತರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ 7 ಇಂಚು ಉದ್ದದ ಕಪ್ಪು ಮತ್ತು ಕಂದು ಮಿಶ್ರಿತ ಕೂದಲು ಇದೆ. ಮೈಮೇಲೆ ಕಪ್ಪು ಬಣ್ಣದ ಉದ್ದ ತೋಳಿನ ಸ್ವೆಟರ್, ಹೂವಿನ ಚಿತ್ರವಿರುವ ಸ್ಕಿನ್ ಕಲರ್ ಚೂಡಿದಾರ್ ಧರಿಸಿದ್ದು, ಕೊರಳಲ್ಲಿ ಕರಿಮಣಿ ತಾಳಿ ಸರವಿದೆ.
ಪ್ರಕರಣ 3 : ಶಿವಮೊಗ್ಗ ಮತ್ತು ಭದ್ರಾವತಿ ರೈಲು ನಿಲ್ದಾಣಗಳ ಮಧ್ಯೆ ಬರುವ ರೈಲ್ವೆ ಕಿ.ಮೀ. 50/800-900 ರಲ್ಲಿ, ಸುಮಾರು 25-30 ವರ್ಷ ವಯೋಮಾನದ ಯುವಕನ ಮೃತ ದೇಹ ಪತ್ತೆಯಾಗಿದೆ.
ಮೃತನ ಚಹರೆ 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಡುಗೋಧಿ ಮೈಬಣ್ಣ, ಮೃತನ ಬಲಗೈ ಭುಜದ ಹತ್ತಿರ ಅಮ್ಮ ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಡು ಗುಲಾಬಿ ಬಣ್ಣದ ರೆಡಿಮೇಡ್ ಟೀ ಶರ್ಟ್ ಕಪ್ಪು ಸೈಲೀಶ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಈ ಮೇಲ್ಕಂಡ ಮೃತ ವ್ಯಕ್ತಿಗಳ ವಾರಸುದಾರರ ಇದ್ದಲ್ಲಿ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182-222974/ 948082124 ನ್ನು ಸಂಪರ್ಕಿಸುವಂತೆ ರೈಲ್ವೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga, Mar. 26: In separate incidents, the bodies of a woman and two youths were found near railway tracks at various places under the jurisdiction of Shivamogga Railway Police Station.
The Railway Station Police issued a statement in this regard on March 25. No information about the deceased’s name or residence is available. The announcement appealed to the public for cooperation in locating the deceased’s heirs.
The Railway Police statement said that if there are any heirs of the deceased persons, they should contact the Railway Police Station on telephone number: 08182-222974/ 948082124.