
sagara | ಸಾಗರ | ಕಚೇರಿಗೆ ನುಗ್ಗಿದ ಎಮ್ಮೆ, ಆಕಳುಗಳಿಗೆ ಮೇವು ತಿನ್ನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು..!
ಸಾಗರ (sagara), ಜು. 28: ಅರಣ್ಯ ಪ್ರದೇಶಕ್ಕೆ ಎಮ್ಮೆ, ಆಕಳು ಮತ್ತೀತರ ಜಾನುವಾರುಗಳನ್ನು ಬಿಡಬಾರದು ಎಂದು ರಾಜ್ಯ ಅರಣ್ಯ ಇಲಾಖೆ ಸಚಿವರು ಇತ್ತೀಚೆಗೆ ಹೊರಡಿಸಿದ್ದ ಆದೇಶ ವಿರೋಧಿಸಿ, ಜು. 28 ರಂದು ಕರ್ನಾಟಕ ರಾಜ್ಯ ರೈತ ಸಂಘಟನೆಯು ಸಾಗರ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ನಡೆಸಿತು.
ಸಾಗರ ಪಟ್ಟಣದ ಅರಣ್ಯ ಇಲಾಖೆಯ ಡಿಎಫ್ಓ ಕಚೇರಿ ಎದುರು ಎಮ್ಮೆ, ಆಕಳುಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು. ರೈತ ನಾಯಕ ದಿನೇಶ್ ಶಿರವಾಳ ನೇತೃತ್ವದಲ್ಲಿ ಜಾನುವಾರು ಪಾಲಕರು ಸರ್ಕಾರದ ಆದೇಶದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರು ಕರೆತಂದಿದ್ದ ಎಮ್ಮೆಗಳಿಗೆ ಮೇವು ತಿನ್ನಿಸಿ, ಅರಣ್ಯದಲ್ಲಿ ಜಾನುವಾರುಗಳ ಓಡಾಟಕ್ಕೆ ಅಡ್ಡಿವುಂಟು ಮಾಡುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಟ್ಟರು. ತದನಂತರ ಜಾನುವಾರು ಪಾಲಕರು ಪ್ರತಿಭಟನೆ ಕೈಬಿಟ್ಟರು.
ಖಂಡನೆ : ಜಾನುವಾರುಗಳು ಅರಣ್ಯ ಪ್ರದೇಶದಲ್ಲಿ ಮೇಯುವುದರಿಂದ ಅರಣ್ಯದ ಬೆಳವಣಿಗೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಜಾನುವಾರುಗಳ ಸೆಗಣಿ, ಗಂಜಲದಿಂದ ಅರಣ್ಯದಲ್ಲಿ ಗಿಡ-ಮರಗಳ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಲಿದೆ ಎಂಬುವುದನ್ನು ಆಡಳಿತಗಾರರು ತಿಳಿದುಕೊಳ್ಳಬೇಕಾಗಿದೆ.
ಆದರೆ ಜಾನುವಾರುಗಳು ಗಿಡ-ಮರಗಳನ್ನು ತಿಂದು ಹಾಕುತ್ತವೆ. ಅವುಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕೆಂಬ ಅರಣ್ಯ ಇಲಾಖೆ ಸಚಿವರ ಆದೇಶ ಅರ್ಥಹೀನ, ಮೂರ್ಖತನದಿಂದ ಕೂಡಿದ್ದಾಗಿದೆ ಎಂದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Sagar, July 28: Opposing the recent order issued by the State Forest Department Minister that buffaloes, cows and other livestock should not be allowed in the forest area, Ju. On 28th, the Karnataka State Farmers’ Association staged an innovative protest in Sagar town.