Bhadravati | Bhadravati Block Congress felicitates District Backward Classes President Ramesh Shankarghat Bhadravati | ಭದ್ರಾವತಿ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಶಂಕರಘಟ್ಟರಿಗೆ ಸನ್ಮಾನ

Bhadravati | ಭದ್ರಾವತಿ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್ ಶಂಕರಘಟ್ಟರಿಗೆ ಸನ್ಮಾನ

ಭದ್ರಾವತಿ (Bhadravathi) ಜು. 28: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನವಾಗಿ ನೇಮಕವಾಗಿರುವ ಎಂ.ರಮೇಶ್ ಶಂಕರಘಟ್ಟ ಅವರನ್ನು ಭದ್ರಾವತಿಯ ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. 

ಭದ್ರಾವತಿಯ ಕಾಂಚನ ಹೋಟೆಲ್‍ನಲ್ಲಿ ನಡೆದ ಪಕ್ಷದ ಜಂಟಿ ಕಾರ್ಯಕರ್ತರ ಸಭೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಮೇಶ್ ರವರು ಕ್ಷೇತ್ರದ ಸರ್ವಾಂಗೀಣಾಭಿವೃದ್ದಿಗೆ ಶ್ರಮಿಸುತ್ತಿರುವ ಶಾಸಕರಾದ ಬಿ.ಕೆ.ಸಂಗಮೇಶ್ವರ್ ಇವರ ಕೈ ಬಲಪಡಿಸುವುದರ ಮೂಲಕ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಶ್ರಮಿಸಬೇಕೆಂದು ಕರೆ ನೀಡಿದರಲ್ಲದೆ, ಪ್ರತಿ ತಿಂಗಳು 27 ನೇ ತಾರೀಖು ಕಾರ್ಯಕರ್ತರ ಸಭೆಯನ್ನು ಏರ್ಪಡಿಸಿ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುತಿರುವುದು ಶ್ಲಾಘನೀಯ ಕಾರ್ಯ ಇದಕ್ಕಾಗಿ ಇಬ್ಬರು ಬ್ಲಾಕ್ ಅಧ್ಯಕ್ಷರುಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಷಡಾಕ್ಷರಿಯವರು ಮಾತನಾಡಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರನ್ನಾಗಿ ರಮೇಶ್ ಇವರನ್ನು ನೇಮಿಸಿರುವುದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಚಾರ ಎಂದರು. 

ನಗರ ಅಧ್ಯಕ್ಷರಾದ ಎಸ್.ಕುಮಾರ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಿ ಮುಂದಿನ ಚುನಾವಣೆಗಳಿಗೆ ಅವರನ್ನು ಸಜ್ಜುಗೊಳಿಸಲಾಗುತ್ತಿದೆ. ಇದಕ್ಕೆ ಹಿಂದುಳಿದ ವರ್ಗಗಳ ವಿಭಾಗದ ಸಹಕಾರವು ಅಗತ್ಯವೆಂದರು.

ಕಾರ್ಯಕ್ರಮದಲ್ಲಿ ನಗರ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಗಂಗಾಧರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಅಮೀರ್ ಜಾನ್, ಎಸ್.ಸಿ.ಘಟಕದ ಅಧ್ಯಕ್ಷರಾದ ಈಶ್ವರಪ್ಪ, ಎಸ್ ಟಿ ಘಟಕದ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ, ನಗರಸಭಾ ಸದಸ್ಯರಾದ ಚಿನ್ನಪ್ಪ, ಕಾರ್ಯದರ್ಶಿ ಜಯಪ್ಪ, ಜುಂಜಪ್ಪ, ಶಶಿಕುಮಾರ್, ಪ್ರಕಾಶ್ ತಳ್ಳಿಕಟ್ಟೆ ಮೊದಲಾದವರು ಇದ್ದರು.

Bhadravati | Bhadravati Block Congress felicitates District Backward Classes President Ramesh Shankarghat | Bhadravathi (Bhadravathi) July 27: M. Ramesh Shankarghatta, newly appointed to the Shimoga District Congress Backward Classes Division, was warmly felicitated by the Bhadravathi Urban and Rural Block Congress.

Hosanagara : Man killed by accidental discharge from a loaded gun! ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ! Previous post shimoga | ಶಿವಮೊಗ್ಗ : ಅಣ್ಣನ ಕೊಲೆ – ತಮ್ಮ ಪೊಲೀಸ್ ಬಲೆಗೆ!
The forest department officials fed fodder to the buffaloes and cows that broke into the office..! ಸಾಗರ | ಕಚೇರಿಗೆ ನುಗ್ಗಿದ ಎಮ್ಮೆ, ಆಕಳುಗಳಿಗೆ ಮೇವು ತಿನ್ನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು..! Next post sagara | ಸಾಗರ | ಕಚೇರಿಗೆ ನುಗ್ಗಿದ ಎಮ್ಮೆ, ಆಕಳುಗಳಿಗೆ ಮೇವು ತಿನ್ನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು..!