Thirthahalli: Batteries stolen from mobile tower! | Shivamogga: Case against man who consumed ganja! | raid on gambling den! | ತೀರ್ಥಹಳ್ಳಿ : ಮೊಬೈಲ್ ಟವರ್ ನಲ್ಲಿದ್ದ ಬ್ಯಾಟರಿಗಳ ಕಳವು! | ಶಿವಮೊಗ್ಗ : ಗಾಂಜಾ ಸೇವಿಸಿದ್ದವನ ವಿರುದ್ದ ಕೇಸ್! | ಜೂಜು ಅಡ್ಡೆ ಮೇಲೆ ದಾಳಿ! |

shimoga crime news | ತೀರ್ಥಹಳ್ಳಿ : ಮೊಬೈಲ್ ಟವರ್ ಬ್ಯಾಟರಿಗಳ ಕಳವು | ಶಿವಮೊಗ್ಗ : ಗಾಂಜಾ ಕೇಸ್ | ಜೂಜು ಅಡ್ಡೆ ಮೇಲೆ ದಾಳಿ! |

ತೀರ್ಥಹಳ್ಳಿ (thirthahalli), ಜು. 30: ಬಿಎಸ್ಎನ್ಎಲ್ ಮೊಬೈಲ್ ಟವರ್ ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ಅಪಹರಿಸಿ ಪರಾರಿಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಗ್ರಾಮದಲ್ಲಿ ನಡೆದಿದೆ.

ಈ ಕುರಿತಂತೆ ತೀರ್ಥಹಳ್ಳಿಯ ಸಂದೀಪ ಮಳ್ಳಿಗಾರ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ‘ಜುಲೈ 25 ರಂದು ಸಂಜೆ ಬಸವಾನಿಯ ಬಿಎಸ್ಎನ್ಎಲ್ ಮೊಬೈಲ್ ಟವರ್ ಪರಿಶೀಲನೆಗೆ ತೆರಳಿದಾಗ, ಟವರ್ ನಲ್ಲಿದ್ದ ಬ್ಯಾಟರಿಗಳು ಕಳುವಾಗಿರುವುದು ಕಂಡುಬಂದಿದೆ.

ಒಟ್ಟಾರೆ 2.8 ಲಕ್ಷ ರೂ. ಮೌಲ್ಯದ 2 ವೋಲ್ಟ್ ಸಾಮರ್ಥ್ಯದ 24 ಬ್ಯಾಟರಿಗಳನ್ನು ಕಳವು ಮಾಡಲಾಗಿದೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ತೀರ್ಥಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಶಿವಮೊಗ್ಗ (shivamogga), ಜು. 30: ಹಳೇಯ ಕಟ್ಟಡವೊಂದರ ಒಳಭಾಗದಲ್ಲಿ, ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದೊಡ್ಡಪೇಟೆ ಠಾಣೆ ಪೊಲೀಸರು ದಾಳಿ ನಡೆಸಿ ಕೇಸ್ ದಾಖಲಿಸಿದ ಘಟನೆ, ಜು. 27 ರಂದು ಶಿವಮೊಗ್ಗ ನಗರದ ಓ ಟಿ ರಸ್ತೆಯಲ್ಲಿ ನಡೆದಿದೆ.

ಹೆಡ್ ಕಾನ್ಸ್’ಟೇಬಲ್ ಸುಬ್ರಮಣಿ ಎಂಬುವರು ಗಸ್ತಿನಲ್ಲಿದ್ದ ವೇಳೆ, ಓ ಟಿ ರಸ್ತೆಯ ಹಳೇಯ ಕಟ್ಟಡದಲ್ಲಿ ಹಣ ಕಟ್ಟಿ ಇಸ್ಪೀಟ್ ಜೂಜಾಟದಲ್ಲಿ ಗುಂಪೊಂದು ತೊಡಗಿರುವ ಮಾಹಿತಿ ಲಭಿಸಿತ್ತು.

ಇದರ ಆಧಾರದ ಸ್ಥಳಕ್ಕೆ ತೆರಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ (shivamogga), ಜು. 30: ಗಾಂಜಾ ಸೇವನೆ ಮಾಡಿದ್ದ ಆರೋಪದ ಮೇರೆಗೆ ಓರ್ವನ ವಿರುದ್ದ ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಜು. 27 ರಂದು ನಡೆದಿದೆ.

ಸದರಿ ಠಾಣಾ ವ್ಯಾಪ್ತಿಯ ಊರುಗಡೂರು ಸರ್ಕಲ್ ನ ಲೇಔಟ್ ವೊಂದರ ಬಳಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಅರುಣ್ ಕುಮಾರ್ ಎಂಬುವರು, ಅನುಮಾನಾಸ್ಪದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

 ಈ ವೇಳೆ ಆಪಾದಿತ ವ್ಯಕ್ತಿಯು ಯಾವುದೋ ಮಾದಕ ವಸ್ತು ಸೇವನೆ ಮಾಡಿರುವುದು ಕಂಡುಬಂದಿದ್ದು, ಆತನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಈ ವೇಳೆ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ದ ಕಾನೂನು ರೀತ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Thirthahalli: Batteries stolen from mobile tower! | Shivamogga: Case against man who consumed ganja! | police raid on gambling den! |

Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ! Previous post shimoga rain news | ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ!
Case of theft of gold jewelry at home : Woman arrested! ಮನೆಯಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ : ಮಹಿಳೆ ಬಂಧನ!’ Next post bhadravati | holehonnuru news | ಮನೆಯಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ : ಮಹಿಳೆ ಬಂಧನ!’