
shimoga rain news | ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ!
ಶಿವಮೊಗ್ಗ (shivamogga), ಜು. 30: ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಚುರುಕುಗೊಂಡಿದ್ದ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಿದೆ. ಇದರಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ.
ಜು.30 ರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಒಳಹರಿವು 12,466 ಕ್ಯೂಸೆಕ್ ಗೆ ಇಳಿಕೆಯಾಗಿದೆ. 7658 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಡ್ಯಾಂ ನೀರಿನ ಮಟ್ಟ 1811 (ಗರಿಷ್ಠ ಮಟ್ಟ : 1819) ಅಡಿಯಿದೆ. ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನು ಕೇವಲ 8 ಅಡಿ ನೀರು ಹರಿದುಬರಬೇಕಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1810. 50 ಅಡಿಯಿತ್ತು.
ಮಧ್ಯ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾದ ಭದ್ರಾ ಒಳಹರಿವು 16,694 ಕ್ಯೂಸೆಕ್ ಇದೆ. ಒಳಹರಿವಿನಷ್ಟೆ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ 180. 3 (ಗರಿಷ್ಠ ಮಟ್ಟ : 186) ಅಡಿಯಿದೆ. ಪ್ರಸ್ತುತ ವರ್ಷ ಡ್ಯಾಂ ಗರಿಷ್ಠ ಮಟ್ಟ ತಲುಪುವದಕ್ಕು ಮುನ್ನವೇ ನೀರನ್ನು ಹೊರ ಹರಿಸಲಾಗುತ್ತಿದೆ.
ಉಳಿದಂತೆ ತುಂಗಾ ಡ್ಯಾಂ ಒಳಹರಿವಿನಲ್ಲಿಯೂ ಇಳಿಕೆ ಕಂಡುಬಂದಿದ್ದು, 26,910 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ತುಂಗಭದ್ರಾ ಡ್ಯಾಂಗೆ ಬಿಡಲಾಗುತ್ತಿದೆ.
ಮಳೆ ವಿವರ : ಜು. 30 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 23 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಈ ಮುಂದಿನಂತಿದೆ. ಮಾಣಿಯಲ್ಲಿ 48 ಮಿಲಿ ಮೀಟರ್ (ಮಿ.ಮೀ.), ಯಡೂರು 45 ಮಿ.ಮೀ., ಹುಲಿಕಲ್ 63 ಮಿ.ಮೀ., ಮಾಸ್ತಿಕಟ್ಟೆ 74 ಮಿ.ಮೀ., ಚಕ್ರಾ 33 ಮಿ.ಮೀ., ಸಾವೇಹಕ್ಲು 60 ಮಿ.ಮೀ.,
ಶಿವಮೊಗ್ಗ 2.40 ಮಿ.ಮೀ., ಭದ್ರಾವತಿ 1.80 ಮಿ.ಮೀ., ತೀರ್ಥಹಳ್ಳಿ 19.50 ಮಿ.ಮೀ., ಸಾಗರ 14.90 ಮಿ.ಮೀ., ಶಿಕಾರಿಪುರ 2.40 ಮಿ.ಮೀ., ಸೊರಬ 5.20 ಮಿ.ಮೀ. ಹಾಗು ಹೊಸನಗರದಲ್ಲಿ 9.30 ಮಿ.ಮೀ. ಮಳೆಯಾಗಿದೆ.
Shivamogga, July 30: The intensity of the monsoon rains, which had intensified in the Malnad region for the past few days, has reduced. This has led to a decrease in the inflow of major reservoirs. As of 8 am on July 30, the inflow of Linganamakki Dam, the state’s major hydroelectric power generation center, has decreased to 12,466 cusecs. 7658 cusecs of water is being released.
The dam water level is 1811 feet (maximum level: 1819). Only 8 feet of water needs to flow to reach the maximum level of the dam. Last year, on this day, the dam water level was 1810. 50 feet.