
shimoga | ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ತುಂಗಾ ನದಿ ನೀರು : MLA ಶಾರದಾ ಪೂರ್ಯನಾಯ್ಕ್ ಸಂತಸ
ಶಿವಮೊಗ್ಗ (shivamogga), ಆ. 1: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿವಿಧ ಗ್ರಾಮಗಳ ಕೆರೆಗಳಿಗೆ ತುಂಗಾ ನದಿಯಿಂದ ನೀರು ಪೂರೈಕೆಯಾಗುತ್ತಿರುವುದಕ್ಕೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 1 ರಂದು ತಮ್ಮನ್ನು ಸಂರ್ಪಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹನಸವಾಡಿ ಸಮೀಪದ ತುಂಗಾ ನದಿಯಿಂದ ಸುಮಾರು 29 ಕೆರೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಬಹುತೇಕ ಪೂರ್ಣ ಹಂತಕ್ಕೆ ಬಂದಿದೆ.
ಕುಂಚೇನಹಳ್ಳಿ, ಬಸವನಗಂಗೂರು, ತ್ಯಾಜವಳ್ಳಿ, ಹಣಸೋಡು ಸೇರಿದಂತೆ ಹಲವು ಗ್ರಾಮಗಳ ಸುಮಾರು 29 ಕೆರೆಗಳಿಗೆ ತುಂಗಾ ನದಿ ನೀರು ಪೂರೈಕೆಯಾಗಲಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಕೆರೆಗಳು ಭರ್ತಿಯಾದರೆ ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ. ಜಾನುವಾರುಗಳಿಗೆ ಬೇಸಿಗೆ ವೇಳೆಯೂ ಕುಡಿಯುವ ನೀರು ಲಭಿಸಲಿದೆ. ಹಾಗೆಯೇ ಅಂತರ್ಜಲ ವೃದ್ದಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹೊಸ ಯೋಜನೆ : ಗ್ರಾಮಾಂತರ ಕ್ಷೇತ್ರದ ಮಲೇಶಂಕರ ಭಾಗದ ಕೆರೆಗಳಿಗೆ ತುಂಗಾ ನದಿಯಿಂದ ಹಾಗೂ ಚೋರಡಿ ಭಾಗದ ಕೆರೆಗಳಿಗೆ ಕುಮದ್ವತಿ ನದಿಯಿಂದ ನೀರು ಪೂರೈಕೆ ಮಾಡುವ ಯೋಜನೆಯಿದೆ.
ಈಗಾಗಲೇ ಸದರಿ ಯೋಜನೆಗಳ ಸಮಗ್ರ ವರದಿ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸರ್ಕಾರದಿಂದ ಯೋಜನೆಗೆ ಅನುಮತಿ ದೊರಕಬೇಕಾಗಿದೆ. ಈ ಸಂಬಂಧ ತಾವು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಂಡಿದ್ದೆನೆ ಎಂದು ಮಾಹಿತಿ ನೀಡಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ಕ್ರಮ : ಈಗಾಗಲೇ ಅನುಷ್ಠಾನವಾಗಿರುವ ಹೊಸಹಳ್ಳಿ ಏತ ನೀರಾವರಿ ಯೋಜನೆಯಡಿ ಕೆಲ ಸಮಸ್ಯೆಗಳು ಎದುರಾಗುತ್ತಿವೆ. ಸದರಿ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಿಕೊಂಡು ಬರಲಾಗುತ್ತಿದೆ ಎಂದು ಇದೇ ವೇಳೆ ಶಾರದಾ ಪೂರ್ಯನಾಯ್ಕ್ ಅವರು ತಿಳಿಸಿದ್ದಾರೆ.
Shivamogga, Aug. 1: Sharada Pooryanaik, MLA of Shivamogga Rural constituency, has expressed happiness over the fact that water is being supplied from the Tunga River to the lakes of various villages in the Shivamogga Rural constituency.