Shivamogga Fort Police Station staff showed honesty by returning the purse containing the money they found! ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಸಿಬ್ಬಂದಿ!

shimoga | ಪ್ರಾಮಾಣಿಕತೆ ಮೆರೆದ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಸಿಬ್ಬಂದಿ!

ಶಿವಮೊಗ್ಗ (shivamogga), ಆಗಸ್ಟ್ 11: ಗಸ್ತು ನಿರ್ವಹಣೆ ಮಾಡುವ ವೇಳೆ ಸಿಕ್ಕಿದ ಪರ್ಸ್ ವೊಂದನ್ನು, ಮೂಲ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಸಿಬ್ಬಂದಿಯೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಟಿ ಮಂಜುನಾಥ್ ಎಂಬುವರೆ ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಇವರ ಕಾರ್ಯಕ್ಕೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಾಯ್ತು? : ಗಾಂಧಿ ಬಜಾರ್ ರಸ್ತೆಯಲ್ಲಿ ರಾತ್ರಿ ಮಂಜುನಾಥ್ ಸಿ ಅವರು ಗಸ್ತು ಕಾರ್ಯ ನಡೆಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅವರಿಗೆ ಪರ್ಸ್ ವೊಂದು ಸಿಕ್ಕಿತ್ತು.

ಸದರಿ ಪರ್ಸ್ ನಲ್ಲಿ ನಗದು ಮತ್ತೀತರ ದಾಖಲೆಗಳಿರುವುದು ಕಂಡುಬಂದಿತ್ತು. ತಪಾಸಣೆ ವೇಳೆ ಶಿವಮೊಗ್ಗದ ಕೋರ್ಪಲಯ್ಯ ಕೇರಿ ನಿವಾಸಿ, ಕಲಾವಿದರಾದ ವೆಂಕಟೇಶ್ ಎಂಬುವರಿಗೆ ಸೇರಿದ್ದಾಗಿದೆ ಎಂಬುವುದು ಪತ್ತೆಯಾಗಿತ್ತು.

ಆಗಸ್ಟ್ 11 ರ ಬೆಳಿಗ್ಗೆ ಕಲಾವಿದ ವೆಂಕಟೇಶ್ ಅವರಿಗೆ, ಮಂಜುನಾಥ್ ಸಿ ಅವರು ಪರ್ಸ್ ಹಿಂದಿರುಗಿಸಿದ್ದಾರೆ. ಸಿಬ್ಬಂದಿಯ ಪ್ರಾಮಾಣಿಕತೆಗೆ ವೆಂಕಟೇಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shivamogga, August 11: A police officer at the Kote Police Station in Shivamogga has shown his honesty by returning a purse found during patrol to its rightful owner.

Police personnel honored for helping provide shelter to poor girls deprived of parental care ಪೋಷಕತ್ವದಿಂದ ವಂಚಿತರಾದ ಬಡ ಬಾಲಕಿಯರಿಗೆ ಆಶ್ರಯ ಕಲ್ಪಿಸಲು ನೆರವಾದ ಪೊಲೀಸ್ ಸಿಬ್ಬಂದಿಗೆ ಸನ್ಮಾನ Previous post shimoga | ಪೋಷಕತ್ವದಿಂದ ವಂಚಿತರಾದ ಬಡ ಬಾಲಕಿಯರಿಗೆ ಆಶ್ರಯ ಕಲ್ಪಿಸಲು ನೆರವಾದ ಪೊಲೀಸ್ ಸಿಬ್ಬಂದಿಗೆ ಸನ್ಮಾನ
Power outages in various parts of Shivamogga city on November 30th! ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ! Next post shimoga | power outage | ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 14 ರಂದು ವಿದ್ಯುತ್ ವ್ಯತ್ಯಯ