Mysterious disappearance of student from Agumbe school hostel: Police department appeals for help in finding him ಆಗುಂಬೆಯ ಶಾಲಾ ಹಾಸ್ಟೆಲ್ ನಿಂದ ವಿದ್ಯಾರ್ಥಿಯ ನಿಗೂಢ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

agumbe news | ಆಗುಂಬೆಯ ಶಾಲಾ ಹಾಸ್ಟೆಲ್ ನಿಂದ ವಿದ್ಯಾರ್ಥಿಯ ನಿಗೂಢ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

ತೀರ್ಥಹಳ್ಳಿ (thirthahalli), ಆಗಸ್ಟ್ 20: ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಎವಿಎಂ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದರ್ಶನ್ ಬಿನ್ ವಿಜಯ್ ಎಂಬ 14 ವರ್ಷದ ಬಾಲಕ, ಶಾಲೆಯ ಹಾಸ್ಟೆಲ್‌ನಿಂದ ಆಗಸ್ಟ್ 18 ರಿಂದ ನಾಪತ್ತೆಯಾಗಿದ್ದು, ಇಲ್ಲಿಯವರೆಗೂ ಬಾಲಕನ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಬಾಲಕನ ಚಹರೆ : ಬಾಲಕನು 4. 6 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ, ಎಣ್ಣೆಕೆಂಪು ಮೈಬಣ್ಣ ಹೊಂದಿದ್ದು, ಎಡ ಪಕ್ಕೆಯಲ್ಲಿ ಕಪ್ಪು ಮಚ್ಚೆಯಿರುತ್ತದೆ.

ಬಾಲಕನು ಕನ್ನಡ ಮತ್ತು ತಮಿಳು ಮಾತಾನಾಡುತ್ತಿದ್ದು, ಹೊರಹೋಗುವಾಗ ಗ್ರೇ ಬಣ್ಣದ ಅರ್ಧ ತೋಳಿನ ಅಂಗಿ, ಜರ್ಕಿನ್, ಬ್ಲೂ ಬಣ್ಣದ ಪ್ಯಾಂಟ್, ಬಿಳಿ ಚಪ್ಪಲಿ, ಆಕಾಶ ನೀಲಿ ಬಣ್ಣದ ಬ್ಯಾಗ್ ಹಾಕಿಕೊಂಡಿರುತ್ತಾನೆ.

ಬಾಲಕನ ಸುಳಿವು ದೊರೆತಲ್ಲಿ ಶಿವಮೊಗ್ಗ ಎಸ್.ಪಿ ಕಚೇರಿ 08182-261400, ತೀರ್ಥಹಳ್ಳಿ ಡಿವೈಎಸ್‌ಪಿ 08181-220388, ಮಾಳೂರು ಸಿಪಿಐ 9480803333 ಹಾಗೂ ಆಗುಂಬೆ ಪಿಎಸ್‌ಐ 9480803314 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯು ಆಗಸ್ಟ್ 20 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Thirthahalli, August 20: The police department said that a 14-year-old boy named Darshan, who was studying in class 8 at AVM School in Agumbe, Thirthahalli taluk, had gone missing from the school hostel since August 18 and no trace of the boy has been found till date.

In a statement issued by the police department on August 20, anyone with information about the boy should contact the Shivamogga SP office at 08182-261400, Thirthahalli DySP at 08181-220388, Malur CPI at 9480803333, and Agumbe PSI at 9480803314.

Collision between milk truck and bike: Two students die in horrific accident! ಶಿವಮೊಗ್ಗದಲ್ಲಿ ಹಾಲಿನ ವಾಹನ – ಬೈಕ್ ನಡುವೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳ ದಾರುಣ ಸಾವು! Previous post shimoga | ಶಿವಮೊಗ್ಗದಲ್ಲಿ ಹಾಲಿನ ವಾಹನ – ಬೈಕ್ ನಡುವೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳ ದಾರುಣ ಸಾ**ವು!
Shivamogga - Harihar railway line should not be closed : Should the central and state governments take note? ಶಿವಮೊಗ್ಗ – ಹರಿಹರ ರೈಲ್ವೆ ಮಾರ್ಗ ಸ್ಥಗಿತವಾಗದಿರಲಿ : ಕೇಂದ್ರ, ರಾಜ್ಯ ಸರ್ಕಾರಗಳು ಗಮನಿಸಲಿ? Next post shimoga – harihara railway | ಶಿವಮೊಗ್ಗ – ಹರಿಹರ ರೈಲ್ವೆ ಮಾರ್ಗ ಸ್ಥಗಿತವಾಗದಿರಲಿ : ಕೇಂದ್ರ, ರಾಜ್ಯ ಸರ್ಕಾರಗಳು ಗಮನಿಸಲಿ?