CM Siddaramaiah's office grievance department attracts attention! ನಾಗರೀಕರ ಸಮಸ್ಯೆ ಪರಿಹಾರಕ್ಕೆ ವೇದಿಕೆಯಾಗುತ್ತಿರುವ ಸಿಎಂ ಸಿದ್ದರಾಮಯ್ಯ ಕಚೇರಿ ಕುಂದುಕೊರತೆ ವಿಭಾಗ!

cm office news | ನಾಗರೀಕರ ಸಮಸ್ಯೆ ಪರಿಹಾರಕ್ಕೆ ವೇದಿಕೆಯಾಗುತ್ತಿರುವ ಸಿಎಂ ಸಿದ್ದರಾಮಯ್ಯ ಕಚೇರಿ ಕುಂದುಕೊರತೆ ವಿಭಾಗ!

ಶಿವಮೊಗ್ಗ (shivamogga), ಅಕ್ಟೋಬರ್ 12: ಪ್ರಸ್ತುತ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಜೀವನದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ, ವ್ಯಾಪಕ ಮಹತ್ವ ಪಡೆದುಕೊಂಡಿವೆ. ನಾಗರೀಕರ ಅಭಿವ್ಯಕ್ತಿಯ ಪರಿಣಾಮಕಾರಿ ವೇದಿಕೆಗಳಾಗುತ್ತಿವೆ. ಜೊತೆಗೆ ಆಡಳಿತ ವ್ಯವಸ್ಥೆ ಸಂಪರ್ಕಕ್ಕೂ ಸುಲಭ ಮಾರ್ಗಗಳಾಗುತ್ತಿವೆ.

ಆಡಳಿತಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ, ನಾಗರೀಕರಿಗೆ ಹಲವು ರೀತಿಯ ಸೇವೆ ಕಲ್ಪಿಸುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಆನ್’ಲೈನ್ ಆಧಾರಿತವಾಗಿ ಸಾರ್ವಜನಿಕರು ತಾವು ಇರುವ ಸ್ಥಳದಿಂದಲೆ ದೂರು ದಾಖಲಿಸುವ ಪ್ರತ್ಯೇಕ ವ್ಯವಸ್ಥೆ ಮಾಡಿದೆ.

ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಕೂಡ, ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರು ವ್ಯಕ್ತಪಡಿಸುವ ಕುಂದುಕೊರತೆ ಪರಿಹಾರಕ್ಕೆ ಪ್ರತ್ಯೇಕ ವಿಭಾಗ ತೆರೆದಿದೆ.

ಸದರಿ ವಿಭಾಗವು ತನ್ನ ತ್ವರಿತಗತಿಯ ಕಾರ್ಯನಿರ್ವಹಣೆ ಮೂಲಕ, ರಾಜ್ಯದ ವಿವಿಧೆಡೆಯ ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುತ್ತಿದೆ. ಇದು ನಾಗರೀಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಸಾಮಾಜಿಕ ಜಾಲತಾಣದ ಮೂಲಕ, ನಾಗರೀಕರು ಸಲ್ಲಿಸುವ ಮೂಲಸೌಕರ್ಯ ಸೇರಿದಂತೆ ನಾನಾ ರೀತಿಯ ಅಹವಾಲುಗಳಿಗೆ, ಸಿಎಂ ಕಚೇರಿ ಕುಂದುಕೊರತೆ ವಿಭಾಗವು ಸಮರೋಪಾದಿಯಲ್ಲಿ ಸ್ಪಂದಿಸುತ್ತಿದೆ. ಸಂಬಂಧಿಸಿದ ಜಿಲ್ಲಾ ಕೇಂದ್ರಗಳ ಇಲಾಖೆಗಳನ್ನು ನೇರವಾಗಿ ಸಂಪರ್ಕಿಸಿ ದೂರಿನ ಸತ್ಯಾಸತ್ಯತೆ ಪರಿಶೀಲಿಸುತ್ತಿದೆ. ನಂತರ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಿದೆ.

ದಕ್ಷ ತಂಡ : ಸಿಎಂ ಕಚೇರಿ ಕುಂದುಕೊರತೆ ವಿಭಾಗದ ಖಡಕ್ ಕಾರ್ಯನಿರ್ವಹಣೆಯು, ಜಿಲ್ಲಾ ಕೇಂದ್ರಗಳಲ್ಲಿನ ಆಡಳಿತ ವ್ಯವಸ್ಥೆ ಚುರುಕುಗೊಳ್ಳುವಂತೆ ಮಾಡಿದೆ. ಸಿಎಂ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಅಧಿಕಾರಿಯಾಗಿರುವ ಡಾ. ವೈಷ್ಣವಿ ಮತ್ತವರ ಸಿಬ್ಬಂದಿಗಳ ಪರಿಣಾಮಕಾರಿ ಕಾರ್ಯನಿರ್ವಹಣೆ ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬದಲಾದ ಪಾರ್ಕ್ : ಶಿವಮೊಗ್ಗ ನಗರದ ಆರ್.ಎಂ.ಎಲ್ ನಗರದಲ್ಲಿ ಅವ್ಯವಸ್ಥೆಯ ಆಗರವಾಗಿದ್ದ ಸಾರ್ವಜನಿಕ ಉದ್ಯಾನವನದ ಕುರಿತಂತೆ  ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೆ ಸ್ಪಂದಿಸಿದ ಸಿಎಂ ಕಚೇರಿ ಕುಂದುಕೊರತೆ ವಿಭಾಗವು, ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಅದರಂತೆ ಪಾಲಿಕೆ ಆಡಳಿತವು ಉದ್ಯಾನವನ ಅವ್ಯವಸ್ಥೆ ಸರಿಪಡಿಸಿದೆ. ಇದಕ್ಕೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಾಗರೀಕರಿಗೆ ಅನುಕೂಲ : ಮೂಲಸೌಕರ್ಯ ಸೇರಿದಂತೆ ನಾನಾ ಸಮಸ್ಯೆಗಳ ಪರಿಹಾರಕ್ಕೆ ನಾಗರೀಕರು ಈ ಹಿಂದೆ ಸರ್ಕಾರಿ ಕಚೇರಿಗಳಿಗೆ ನಿರಂತರವಾಗಿ ಅಲೆದಾಡಬೇಕಾಗಿತ್ತು. ಆದರೆ ಸದ್ಯ ಸಾಮಾಜಿಕ ಜಾಲತಾಣಗಳು, ಆಡಳಿತ ವ್ಯವಸ್ಥೆಯ ಸಂಪರ್ಕಕ್ಕೆ ಉತ್ತಮ ವೇದಿಕೆಗಳಾಗಿವೆ. ಜೊತೆಗೆ ತ್ವರಿತಗತಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗುತ್ತಿವೆ ಎಂದು ಪ್ರಜ್ಞಾವಂತ ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Shivamogga, October 12: Currently, social media platforms have not only created a stir in public life, but have also gained widespread importance. They are becoming effective platforms for citizens to express themselves. They are also becoming easy ways to communicate with the administrative system. Chief Minister Siddaramaiah’s office has also opened a separate section to address grievances expressed by citizens through social media. The department, through its fast-paced functioning, is providing solutions to infrastructural and administrative problems in various parts of the state within a time frame. This is being appreciated by the citizens.

'BJP members who missed the GBA meeting are opponents of Bengaluru's development' - CM Siddaramaiah criticizes ‘ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳು’ - ಸಿಎಂ ಸಿದ್ದರಾಮಯ್ಯ ಟೀಕೆ Previous post bengaluru news | ‘ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿ ವಿರೋಧಿಗಳು’ – ಸಿಎಂ ಸಿದ್ದರಾಮಯ್ಯ ಟೀಕೆ