
shimoga BREAKING NEWS | ಶಿವಮೊಗ್ಗ : ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆಗೆ ಶರಣು!
ಶಿವಮೊಗ್ಗ, ಅಕ್ಟೋಬರ್ 12: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಕೆಳಕ್ಕೆ ಹಾರಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ, ಅಕ್ಟೋಬರ್ 12 ರ ಸಂಜೆ ದುರ್ಗಿಗುಡಿ ರಸ್ತೆಯಲ್ಲಿರುವ ಶನಿ ಮಹಾತ್ಮ ಸ್ವಾಮಿ ದೇವಾಲಯ ಹಿಂಭಾಗದ ರಸ್ತೆಯಲ್ಲಿ ನಡೆದಿದೆ.
ನಗರದ ಹೋಟೆಲ್ ವೊಂದರ ಉದ್ಯೋಗಿಯಾಗಿರುವ ಅಮಿತ್ (27) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಈತ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರೆಂದು ತಿಳಿದುಬಂದಿದೆ.
ಸಂಜೆ 4 ರಿಂದ 4.30 ರ ನಡುವೆ ಘಟನೆ ನಡೆದಿದೆ. ಕಟ್ಟಡದ ಮೇಲಿಂದ ಯುವಕ ಕೆಳಕ್ಕೆ ಬೀಳುತ್ತಿದ್ದಂತೆ, ಸುತ್ತಮುತ್ತಲಿನ ನಿವಾಸಿಗಳು ಆತನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಾಹ್ನದವರೆಗೂ ಹೋಟೆಲ್ ನಲ್ಲಿ ಯುವಕ ಕೆಲಸ ಮಾಡಿದ್ದಾನೆ. ಭಾನುವಾರ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರ ಹೋಟೆಲ್ ಉದ್ಯೋಗಿಗಳಿಗೆ ರಜೆ ನೀಡಲಾಗಿತ್ತು.
ಯುವಕನ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಜಯನಗರ ಠಾಣೆ ಇನ್ಸ್’ಪೆಕ್ಟರ್ ಸಿದ್ದೇಗೌಡ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
Shivamogga, October 12: A young man committed suicide by jumping off a three-storey building under construction on the road behind the Shani Mahatma Temple on Durgigudi Road on the evening of October 12.