shimoga crime news | ಶಿವಮೊಗ್ಗ : ಪ್ರತ್ಯೇಕ ದರೋಡೆ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್!
ಶಿವಮೊಗ್ಗ (shimoga), ನವೆಂಬರ್ 15: ಶಿವಮೊಗ್ಗದಲ್ಲಿ ನಡೆದ ಎರಡು ಪ್ರತ್ಯೇಕ ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿನೋಬನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿವರ ಈ ಮುಂದಿನಂತಿದೆ.
ಪ್ರಕರಣ 1 : 14/10/2025 ರಂದು ಬೆಳಿಗ್ಗೆ 4 ಗಂಟೆ ಸಮಯದಲ್ಲಿ ನವುಲೆಯ ಶಿವಬಸವನಗರ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರನ್ನು, ಬೈಕ್ ನಲ್ಲಿ ಆಗಮಿಸಿದ ಅಪರಿಚಿತನೋರ್ವ ಅಡ್ಡಗಟ್ಟಿ ಬೆದರಿಕೆ ಹಾಕಿದ್ದ. ನಂತರ ಅವರ ಬಳಿಯಿದ್ದ ಬಂಗಾರದ ಉಂಗುರ ಹಾಗೂ ಹಣ ಅಪಹರಿಸಿ ಪರಾರಿಯಾಗಿದ್ದ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಕಟ್ಟೆ ರಸ್ತೆ ನವುಲೆಯ ನಿವಾಸಿ ಸಚಿನ್ ಯಾನೆ ಶಾಡೋ (27) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 7. 90 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ 2 : ಆಲ್ಕೋಳದ ಮಂಗಳ ಮಂದಿರ ರಸ್ತೆಯಲ್ಲಿ 25/10/2025 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆ ಮುಂಭಾಗ ರಂಗೋಲಿ ಹಾಕುತ್ತಿದ್ದ ಮಹಿಳೆಯೋರ್ವರ ಬಳಿ, ವಿಳಾಸ ಕೇಳುವ ನೆಪದಲ್ಲಿ ಆಗಮಿಸಿದ ಬೈಕ್ ಸವಾರನೋರ್ವ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ.
ಈ ಸಂಬಂಧ ಬೊಮ್ಮನಕಟ್ಟೆಯ ಎಂಬಿಎಸ್ ಲೇಔಟ್ ನಿವಾಸಿ ಭುವನೇಶ್ವರ ಯಾನೆ ಭುವನ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 13 ಗ್ರಾಂ ತೂಕದ ಬಂಗಾರದ ಸರ, ಕೃತ್ಯಕ್ಕೆ ಉಪಯೋಗಿಸಿ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆ : ಎರಡು ಪ್ರಕರಣಗಳ ಪತ್ತೆಗೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಎಎಸ್ಪಿಗಳಾದ ಕಾರಿಯಪ್ಪ, ರಮೇಶ್, ಡಿವೈಎಸ್ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ಉಸ್ತುವಾರಿಯಲ್ಲಿ, ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ,
ಸಿಬ್ಬಂದಿಗಳಾದ ರಾಜು ಕೆ ಆರ್, ಮನುಶಂಕರ್, ಮಲ್ಲಪ್ಪ ಎಸ್ ಜಿ, ಅರುಣ್ ಕುಮಾರ್ ಎನ್ ಕೆ ರವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Shivamogga, November 15: Vinobanagar police have succeeded in arresting two accused in connection with two separate robbery cases in Shivamogga. The police department has issued a statement in this regard, the details of which are as follows.
